ಬೀಜಿಂಗ್[ಮೇ.27]: ಹುಟ್ಟುಹಬ್ಬ, ಆ್ಯನಿವರ್ಸರಿ ಹಾಗೂ ಪ್ರೇಮಿಗಳ ದಿನದಂದು ಗರ್ಲ್‌ಫ್ರೆಂಡ್ ಮುಖದಲ್ಲಿ ನಗು ಮೂಡಿಸಲು ಬಾಯ್‌ಫ್ರೆಂಡ್ ಗಿಫ್ಟ್ ಕೊಡುವುದು ಸಾಮಾನ್ಯ. ಆದರೆ ಚೀನಾದ ದಾಹೌ ನಗರದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರ ಸ್ಮಾರ್ಟ್‌ಫೋನ್ ಕೊಡಿಸಲಿಲ್ಲ ಎಂದು ನಡುರಸ್ತೆಯಲ್ಲೇ ಆತನಿಗೆ ಬರೋಬ್ಬರಿ 52 ಬಾರಿ ಕಪಾಳಮೋಕ್ಷ ಮಾಡಿದ್ದಾಳೆ. ಈ ದೃಶ್ಯಾವಳಿಗಳು ರಸ್ತೆ ಬದಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಇದು ಸಾಮಾಜಿಕ ಜಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಕೊಂಚವೂ ಬಿಡುವು ನೀಡದ ಯುವತಿ ಒಂದಾದ ಬಳಿಕ ಮತ್ತೊಂದರಂತೆ ತನ್ನ ಎದುರು ನಿಂತಿದ್ದ ಪ್ರಿಯಕರನಿಗೆ 52 ಬಾರಿ ಕಪಾಳಕ್ಕೆ ಬಾರಿಸುತ್ತಾಳೆ. ಸಾಲದೆಂಬಂತೆ ಅತನಿಗೆ ಬೈಯ್ಯುತ್ತಿರುತ್ತಾಳೆ. ಇದನ್ನು ಗಮನಿಸಿದ ಪೊಲೀಸ್ ಅಧಿಕಾರಿ ಯುವತಿಯನ್ನು ತಡೆಯಲು ಮುಂದಾದಾಗ, ಯುವತಿ ಮತ್ತೆ ಕೋಪಗೊಳ್ಳುವುದನ್ನು ತಪ್ಪಿಸಲು ಪ್ರಿಯಕರ ಪೊಲೀಸರನ್ನೇ ತಡೆಯುತ್ತಾನೆ. ಬಳಿಕ ಇಬ್ಬರನ್ನೂ ಮನಃಶಾಸ್ತ್ರಜ್ಞರ ಬಳಿ ಕರೆದೊಯ್ದು ಕೌನ್ಸೆಲಿಂಗ್ ನೀಡಲಾಗಿದೆ