ಅಲಹಾಬಾದ್(ಸೆ.06): ಉತ್ತರ ಗಂಗಾನದಿ ಸ್ವಚ್ಛಗೊಳಿಸುವ ಸಂದೇಶ ಸಾರುವ ಅಭಿಯಾನದಲ್ಲಿ ಉತ್ತರಪ್ರದೇಶದ ಕಾನ್ಪುರದ 11ವರ್ಷದ ಪುಟ್ಟ ಬಾಲಕಿ ಶ್ರದ್ಧಾ ಶುಕ್ಲಾ 10 ದಿನಗಳಲ್ಲಿ 550 ಕಿ.ಮೀ ಈಜುತ್ತೇನೆ ಎಂದು ಹೇಳಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಸಾಕ್ಷ್ಯಚಿತ್ರ ನಿರ್ಮಾಪಕ ವಿನೋದ್ ಕಾಪ್ಡಿ ಆರೋಪಿಸಿದ್ದಾರೆ.

ಆಕೆ ನಿಜಕ್ಕೂ ಅಷ್ಟೊಂದು ದೂರ ಈಜುತ್ತಿಲ್ಲ, ಸುಳ್ಳು ಹೇಳಿಕೆ ಮೂಲಕ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾಳೆ ಎಂದು ಕಾಪ್ಡಿ ದೂರಿದ್ದಾರೆ. ಶ್ರದ್ಧಾಳ ಸಾಧನೆಯನ್ನು ಚಿತ್ರೀಕರಿಸುವ ನಿರ್ಧಾರದೊಂದಿಗೆ ವಿನೋದ್ ಅವರು ಮುಂಬೈನಿಂದ ತಮ್ಮ ತಂಡದೊಂದಿಗೆ ಇಲ್ಲಿಗೆ ಆಗಮಿಸಿದ್ದರು.  ಬುಧವಾರದಿಂದ ವಿನೋದ್ ಹಾಗೂ ಅವರ ತಂಡ ಶುಕ್ಲಾ ಈಜನ್ನು ಸೆರೆ ಹಿಡಿದಿದ್ದರು, ಆದರೆ ನಮಗೆ ಆಕೆಯ ನಿಜ ಸ್ವರೂಪ ಕಂಡು  ಆಘಾತ ತಂದಿತ್ತು ಎಂದು ವಿವರಿಸಿದ್ದಾರೆ.