ಪಿಯುಸಿ  ಪರೀಕ್ಷೆಯಲ್ಲಿ ಫೇಲ್ ಆದ  ಹಿನ್ನೆಲೆಯಲ್ಲಿ ಡೆತ್ ನೋಟ್ ಬರೆದಿಟ್ಟು, ವಿದ್ಯಾರ್ಥಿನಿ ಮನೆ ಬಿಟ್ಟು ಹೋಗಿದ್ದಾಳೆ. ಬೆಂಗಳೂರಿನ  ವಿದ್ಯಾರಣ್ಯಪುರ  ಸೆಂಟ್ ಫಿಲೋಮಿನಸ್ ಪಿಯು ಕಾಲೇಜ್ ನ ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ವಾಸವಿಯೇ ಮನೆ ಬಿಟ್ಟು ಹೋಗಿರುವ ವಿದ್ಯಾರ್ಥಿನಿ.

ಬೆಂಗಳೂರು(ಮೇ.13): ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆದ ಹಿನ್ನೆಲೆಯಲ್ಲಿ ಡೆತ್ ನೋಟ್ ಬರೆದಿಟ್ಟು, ವಿದ್ಯಾರ್ಥಿನಿ ಮನೆ ಬಿಟ್ಟು ಹೋಗಿದ್ದಾಳೆ. ಬೆಂಗಳೂರಿನ ವಿದ್ಯಾರಣ್ಯಪುರ ಸೆಂಟ್ ಫಿಲೋಮಿನಸ್ ಪಿಯು ಕಾಲೇಜ್ ನ ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ವಾಸವಿಯೇ ಮನೆ ಬಿಟ್ಟು ಹೋಗಿರುವ ವಿದ್ಯಾರ್ಥಿನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಲ್ಲಾ ವಿಷಯಗಳಲ್ಲೂ 80 ಕ್ಕೂ ಹೆಚ್ಚು ಅಂಕ ಗಳಿಸಿದ ವಾಸವಿ, ಗಣಿತದಲ್ಲಿ ಮಾತ್ರ 30 ಅಂಕ ಪಡೆದಿದ್ದರು. ಇದರಿಂದ ಮನನೊಂದ ವಾಸವಿ, ತಂದೆ-ತಾಯಿ ಕೆಲಸಕ್ಕೆ ಹೋದ ನಂತರ ಮನೆ ಬಿಟ್ಟು ಹೋಗಿದ್ದಾಳೆ. ನಿಮ್ಮ ಕನಸುಗಳನ್ನು ನನ್ನ ಕೈಯಲ್ಲಿ ಈಡೇರಿಸಲು ಸಾಧ್ಯವಾಗಿಲ್ಲ. ಕ್ಷಮಿಸಿ ಬಿಡಿ, ಮಾಮ್ ಅಂಡ್ ಡ್ಯಾಡ್ ಎಂದು ಡೇತ್ ನೋಟ್ ಬರೆದಿಟ್ಟು ಹೋಗಿದ್ದಾಳೆ. ಮಗಳು ಮನೆ ಬಿಟ್ಟು ಹೋಗಿರುವುದಿಂದ ಪೋಷಕರಿಗೆ ದಿಕ್ಕೆ ತೋಚದಂತಾಗಿದೆ.