ಜಾಗತಿಕ ತಾಪಮಾನ ಕುರಿತು ಟ್ವೀಟ್ ಮಾಡಿ ಅಪಹಾಸ್ಯಕ್ಕೆ ಗುರಿಯಾದ ಟ್ರಂಪ್! ವಾಷಿಂಗ್ಟನ್‌ನ ಅತ್ಯಂತ ಶೀತ ಹವಾಮಾನಕ್ಕೆ ಟ್ರಂಪ್ ಟ್ವೀಟನ್ ಟ್ರಂಪ್ ಟ್ವೀಟ್‌ಗೆ ರಿಟ್ವೀಟ್ ಮೂಲಕ ಉತ್ತರ ಕೊಟ್ಟ ಭಾರತೀಯ ಯುವತಿ! ವೆದರ್ ಮತ್ತು ಕ್ಲೈಮೆಟ್ ಎರಡೂ ಒಂದೇ ಅಲ್ಲ ಎಂದ ಅಸ್ಥಾ ಸರ್ಮಾಹ್! ಅಸ್ಥಾ ಟ್ವೀಟ್‌ಗೆ ವಿಶ್ವದಾದ್ಯಂತ ಮೆಚ್ಚುಗೆಯ ಸುರಿಮಳೆ! ಜಾಗತಿಕ ತಾಪಮಾನ ಕುರಿತು ಇಂಟರ್ನಶಿಪ್ ಮಾಡಲು ಆಹ್ವಾನ  

ದೀಸಪುರ್(ನ.28): ಅಮೆರಿಕದಲ್ಲಿ ತೀವ್ರತರವಾದ ಹವಾಮಾನ ಬದಲಾವಣೆಗಳಾಗುತ್ತಿದ್ದು, ವಾಷಿಂಗ್ಟನ್‌ನಲ್ಲಿ ಇತ್ತೀಚೆಗೆ ಅತ್ಯಂತ ಶೀತ ಹವಾಮಾನ ಕಂಡು ಬಂದಿತ್ತು. ಆದರೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಈ ಕುರಿತು ಟ್ವೀಟ್ ಮಾಡಿ, ಭಾರತೀಯ ಯುವತಿಯೋರ್ವಳಿಂದ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.

ಅಸ್ಸೋಂನ ಅಸ್ಥಾ ಸರ್ಮಾಹ್ ಎಂಬ ಯುವತಿ ಟ್ರಂಪ್ ಟ್ವೀಟ್‌ಗೆ ಮರು ಟ್ವೀಟ್ ಮಾಡಿ ವೆದರ್ ಮತ್ತು ಕ್ಲೈಮೆಟ್ ಎರಡೂ ಒಂದೇ ಅಲ್ಲ ಎಂದು ತಿಳಿಸಿದ್ದಾಳೆ. ಅಲ್ಲದೇ ಈ ಕುರಿತು ಬೇಕಾದರೆ ತಾನು ಎರಡನೇ ಕ್ಲಾಸ್‌ನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ತನ್ನ ಜೊತೆಗಿದ್ದ ಎನ್‌ಸೈಕ್ಲೋಪಿಡಿಯಾ ಕೊಡುವೆ ಎಂದು ಅಸ್ಥಾ ಟ್ರಂಪ್ ಕಾಲೆಳೆದಿದ್ದಾಳೆ.

Scroll to load tweet…

ಇನ್ನು ಅಸ್ಥಾ ಮಾಡಿರು ರಿಟ್ವೀಟ್‌ಗೆ ವಿಶ್ವದಾದ್ಯಂತ ಸುಮಾರು 22,000 ಲೈಕ್ಸ್ ಗಳು ಬಂದಿದ್ದು, ಈಕೆಯ ಟ್ವೀಟ್ ಸುಮಾರು 5,100 ಬಾರಿ ರಿಟ್ವೀಟ್ ಮಾಡಲಾಗಿದೆ.

ಅಲ್ಲದೇ ಅಸ್ಥಾಳಿಗೆ ಹವಾಮಾನ ವೈಪರೀತ್ಯ ಹಾಗೂ ಜಾಗತಿಕ ತಾಪಮಾನದಿಂದಾಗಿ ಅರೇಬಿಯನ್ ಸಮುದ್ರದಲ್ಲಿ ಆಗುತ್ತಿರುವ ಬದಲಾವಣೆ ಕುರಿತು ಅಧ್ಯಯನ ನಡೆಸಲು ಇಂಟರ್ನಶಿಪ್ ಕೂಡ ಆಫರ್ ಮಾಡಲಾಗಿದೆ.