ಕಂಪನಿ ವಿರಾಟ್ ಕೊಹ್ಲಿಯೊಂದಿಗೆ ಮಾಡಿಕೊಂಡ ಒಪ್ಪಂದದ ಮೊತ್ತವನ್ನು ಬಹಿರಂಗ ಪಡಿಸಿಲ್ಲ.

ನವದೆಹಲಿ(ಜ.10): ಮೊಬೈಲ್‌ ಹ್ಯಾಂಡ್‌'ಸೆಟ್‌ ತಯಾರಕ ಕಂಪೆನಿಯಾದ ಜಿಯೋನಿ ಇಂಡಿಯಾ ತನ್ನ ಉತ್ಪನ್ನದ ಪ್ರಚಾರ ರಾಯ​ಭಾರಿ​ಯಾಗಿ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿಯನ್ನು ಆಯ್ಕೆಮಾಡಿ​ಕೊಂಡಿದೆ.

ಈಗಾಗಲೇ ನಟಿ ಅಲಿಯಾ ಭಟ್‌ ಅವರನ್ನೂ ಪ್ರಚಾರ ರಾಯಭಾರಿಯನ್ನಾಗಿ ಆರಿಸಿರುವ ಜಿಯೋನಿ, ಕಳೆದ ನಾಲ್ಕು ವರ್ಷಗಳಲ್ಲಿ 1.2 ಕೋಟಿ ರು. ವ್ಯವಹಾರ ನಡೆಸಿದೆ.

‘‘ವಿರಾಟ್‌ ಹಾಗೂ ಅಲಿಯಾ ಇಬ್ಬರೂ ಜಿಯೋನಿ ಉತ್ಪನ್ನದ ಪ್ರಚಾರ ರಾಯಭಾರಿಗಳಾಗಿ ಕಾರ್ಯನಿರ್ವಹಿಸಲಿ​ದ್ದಾರೆ. ಈ ಇಬ್ಬರು ಸ್ಟಾರ್‌ ಸಂಗಮ ಜಿಯೋ​ನಿ​ಯನ್ನು ಮತ್ತೊಂದು ಮಜಲಿಗೆ ಕೊಂಡೊ​ಯ್ಯುವ ವಿಶ್ವಾಸವಿದೆ'' ಎಂದು ಜಿಯೋನಿ ಇಂಡಿಯಾ ಸಿಇಒ ಮತ್ತು ನಿರ್ವಹಣಾ ನಿರ್ದೇಶಕ ಎಂ.ಡಿ. ಅರವಿಂದ್‌ ಆರ್‌. ವೊಹ್ರಾ ತಿಳಿಸಿದ್ದಾರೆ.

ಕಂಪನಿ ವಿರಾಟ್ ಕೊಹ್ಲಿಯೊಂದಿಗೆ ಮಾಡಿಕೊಂಡ ಒಪ್ಪಂದದ ಮೊತ್ತವನ್ನು ಬಹಿರಂಗ ಪಡಿಸಿಲ್ಲ. 2016ರ ದೀಪಾವಳಿ ಸಂದರ್ಭದಲ್ಲಿ 200 ಕೋಟಿ ರೂಪಾಯಿ ವ್ಯವಹಾರ ಮಾಡಿರುವುದಾಗಿ ಕಂಪನಿ ಹೇಳಿಕೊಂಡಿದೆ.