ನಿಮ್ಮ ಗಾಡಿಗೆ ಪೆಟ್ರೋಲ್, ಡೀಸೆಲ್ ತುಂಬಿಸಲು ಪೆಟ್ರೋಲ್ ಬಂಕ್ ಗೆ ಹೋದಾಗ ದಿನಕ್ಕೊಂದು ಬೆಲೆ ಕೊಡಬೇಕಾಗುತ್ತದೆ. ಇನ್ಮುಂದೆ ಪ್ರತಿದಿನವೂ ಪೆಟ್ರೋಲ್, ಡೇಸೆಲ್ ಬೆಲೆ ಬದಲಾಗಲಿದೆ. ಮುಂದಿನ ಶುಕ್ರವಾರದಿಂದ ಅಂದರೆ ಜೂ.16 ರಿಂದ ಇದು ಜಾರಿಯಾಗಲಿದೆ. ತೈಲಕಂಪನಿಗಳು ಪ್ರತಿದಿನವೂ ಬೆಲೆಯನ್ನು ಪರಿಷ್ಕರಣೆ ಮಾಡಲಿದೆ.

ನವದೆಹಲಿ (ಜೂ.08): ನಿಮ್ಮ ಗಾಡಿಗೆ ಪೆಟ್ರೋಲ್, ಡೀಸೆಲ್ ತುಂಬಿಸಲು ಪೆಟ್ರೋಲ್ ಬಂಕ್ ಗೆ ಹೋದಾಗ ದಿನಕ್ಕೊಂದು ಬೆಲೆ ಕೊಡಬೇಕಾಗುತ್ತದೆ. ಇನ್ಮುಂದೆ ಪ್ರತಿದಿನವೂ ಪೆಟ್ರೋಲ್, ಡೇಸೆಲ್ ಬೆಲೆ ಬದಲಾಗಲಿದೆ. ಮುಂದಿನ ಶುಕ್ರವಾರದಿಂದ ಅಂದರೆ ಜೂ.16 ರಿಂದ ಇದು ಜಾರಿಯಾಗಲಿದೆ. ತೈಲಕಂಪನಿಗಳು ಪ್ರತಿದಿನವೂ ಬೆಲೆಯನ್ನು ಪರಿಷ್ಕರಣೆ ಮಾಡಲಿದೆ.

ಪ್ರತಿದಿನವೂ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪರಿಷ್ಕರಣೆ ಮಾಡುವುದರಿಂದ ಪ್ರಸ್ತುತ ಮಾರುಕಟ್ಟೆಯಲ್ಲಿ ಚಿಲ್ಲರೆ ಬೆಲೆ ಪರಿಣಾಮಕಾರಿಯಾಗಿ ಜಾರಿಯಾಗಲಿದೆ. ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಾಗಲಿದೆ. ಸಾಕಷ್ಟು ಅಭಿವೃದ್ಧಿ ದೇಶಗಳು ಈಗಾಗಲೇ ದಿನದಿಂದ ದಿನಕ್ಕೆ ಬೆಲೆಯನ್ನು ಪರಿಷ್ಕರಿಸಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ಹೇಳಿಕೆ ನೀಡಿದೆ.