ಕಾರವಾರ,[ಮೇ.12]: ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವ ಮೊದಲೇ ರಾಜ್ಯ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಭವಿಷ್ಯ ನುಡಿದಿದ್ದಾರೆ.

ಕಾರವಾರದಲ್ಲಿ ಇಂದು [ಭಾನುವಾರ] ಬಿಜೆಪಿ ಕಾರ್ಯಕರ್ತರ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಮುಗಿದಿದೆ ಎಂದು ಆರಾಮಾಗಿ ಇರಬೇಡಿ. ಯಾವುದೇ ಕ್ಷಣದಲ್ಲಿ ವಿಧಾನಸಭೆ ಚುನಾವಣೆ ಬರಬಹುದಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಗೂ ಮುನ್ನವೇ ವಿಧಾನಸಭೆ ಚುನಾವಣೆ ಬರಬಹುದು ಎಂದು ಹೇಳಿ ಅಚ್ಚರಿ ಮೂಡಿಸಿದರು.

ಜೂನ್, ಜುಲೈ ಇಲ್ಲ ಆಗಸ್ಟ್ ವೇಳೆಗೆ ಸಮ್ಮಿಶ್ರ ಸರ್ಕಾರ ಪತನವಾಗಬಹುದು. ಸರಕಾರ ಪತನಗೊಂಡು ಚುನಾವಣೆ ಬರುವ ಸಾಧ್ಯತೆ ಇದೆ. ಪಕ್ಷದ ಕಾರ್ಯಕರ್ತರು ಸಿದ್ಧರಾಗಿರಬೇಕು ಎಂದು ಹೇಳಿದರು.

ಈಗಿರುವ ಶಾಸಕರು ಮತ್ತೆ ಶಾಸಕರಾಗುತ್ತಾರೆ. ಕಾರ್ಯಕರ್ತರು ರೆಸ್ಟ್ ತೆಗೆದುಕೊಳ್ಳಲು ನಾವಂತೂ ಬಿಡಲ್ಲ. ಮುಂದಿನ ಚುನಾವಣೆಗೆ ಈಗಲೇ ಸಿದ್ಧರಾಗಿ ಎಂದು ಅನಂತ್ ಕುಮಾರ್ ಹೆಗಡೆ ಕರೆ ನೀಡಿದರು.