ಚೆನ್ನೈ (ನ.27): ಸದಾ ವಿವಾದಗಳ ಮೂಲಕ ಸುದ್ದಿಯಾಗುತ್ತಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇದೀಗ ಮಾನವೀಯತೆ ಮೆರೆಯುವ ಮೂಲಕ ಸುದ್ದಿಯಾಗಿದ್ದಾರೆ.

ತಮಿಳುನಾಡಿನ ಇಶಾ ಫೌಂಡೇಷನ್ ಕಾರ್ಯಕ್ರಮವೊಂದರ ನಿಮಿತ್ತ ತೆರಳುವಾಗ ಮಾರ್ಗ ಮಧ್ಯೆ ಪೆರೂರ್ ಎಂಬಲ್ಲಿ ಕಾರು ನಿಲ್ಲಿಸಿ ವಿಮಾನದಿಂದ ಇಳಿಯುವಾಗ ಕಿತ್ತು ಹೋಗಿದ್ದ ಚಪ್ಪಲಿಯನ್ನು ಹೊಲಿಸಿಕೊಂಡಿದ್ದಾರೆ.

ಚಮ್ಮಾರ 10 ರೂಪಾಯಿ ಕೇಳಿದ್ದಕ್ಕೆ 100 ರೂಪಾಯಿ ನೀಡಿದ್ದಾರೆ.  ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲ ದಿನಗಳ ಹಿಂದೆ ಇರಾನಿ ಕಾಫಿ ಅಂಗಡಿಯೊಂದಕ್ಕೆ ತೆರಳಿ ಸರದಿಯಲ್ಲಿ ನಿಂತು ಕಾಫಿ ಪಡೆದ ಫೋಟೋಗಳು ವೈರಲ್ ಆಗಿದ್ದವು.  

ಇದೀಗ ಕೇಂದ್ರ ಜವಳಿ ಖಾತೆಯ ಸಚಿವೆ ಸ್ಮೃತಿ ಇರಾನಿ ರಸ್ತೆ ಬದಿಯಲ್ಲಿ ಚಪ್ಪಲಿ ಹೊಲಿಸಿಕೊಂಡು ಹತ್ತು ಪಟ್ಟು ಹೆಚ್ಚು ಹಣ ನೀಡಿ ಸುದ್ದಿಯಾಗಿದ್ದಾರೆ.