ಜಮ್ಮು (ಅ.01): ಭಾರತೀಯಾ ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಜಮ್ಮು ಮತ್ತು ಕಾಶ್ಮೀರದ ಗಡಿ ಭಾಗಕ್ಕೆ ಭೇಟಿ ನೀಡಿದ್ದಾರೆ.
ಈ ಭೇಟಿಯಲ್ಲಿ ಅವರು ಗಡಿ ಭಾಗದಲ್ಲಿನ ಸುರಕ್ಷತಾ ಸಿದ್ದತೆಗಳನ್ನು ಪರಿಶೀಲಿಸಿದ್ದು ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಲು ಸಕಲ ರೀತಿಯಲ್ಲಿ ಸಜ್ಜಾಗಿರಲು ಸೂಚಿಸಿದ್ದಾರೆ .
ಸರ್ಜಿಕಲ್ ದಾಳಿ ಬಳಿಕ ಇದೆ ಪ್ರಥಮ ಬಾರಿಗೆ ಗಡಿ ಭಾಗಕ್ಕೆ ಭೇಡಿ ನೀಡಿರುವ ದಲ್ಬೀರ್ ಸಿಂಗ್ ದಾಳಿಯ ಕಾರ್ಯಾಚರಣೆಯಲ್ಲಿ ಭಾಗಿಯಾದ ಸೈನಿಕರಿಗೆ ವೈಯುಕ್ತಿಕವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.