ಗೀತಾ, ನಟ ಶಿವರಾಜ್​ಕುಮಾರ್ ಪತ್ನಿ, ಮಾಜಿ ಸಿಎಂ ದಿ.ಬಂಗಾರಪ್ಪ ಪುತ್ರಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಬೆಂಗಳೂರು(ನ.11): ಗೀತಾ ಶಿವರಾಜಕುಮಾರ್ ರಾಜಕೀಯದಿಂದ ದೂರವಿರಲು ಚಿಂತಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಗೀತಾ, ನಟ ಶಿವರಾಜ್​ಕುಮಾರ್ ಪತ್ನಿ, ಮಾಜಿ ಸಿಎಂ ದಿ.ಬಂಗಾರಪ್ಪ ಪುತ್ರಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಚುನಾವಣೆಯಲ್ಲಿ ಸೋತ ಬಳಿಕ ರಾಜಕೀಯದಿಂದ ದೂರವಾಗಿದ್ದ ಗೀತಾ ಶಿವರಾಜಕುಮಾರ್, ಇದೀಗ ರಾಜಕೀಯಕ್ಕೆ ಗುಡ್​ ಬೈ ಹೇಳಲು ಚಿಂತಿಸಿದ್ದಾರೆ ಎನ್ನಲಾಗುತ್ತಿದೆ.

ಇದೇವೇಳೆ, ಸಹೋದರ ಮಧು ಬಂಗಾರಪ್ಪ ಪರ ಮಾತ್ರ ಪ್ರಚಾರ ನಡೆಸಲು ತೀರ್ಮಾನಿಸಿದ್ದಾರೆ. ಬೇರೆ ಯಾವುದೇ ಕ್ಷೇತ್ರ ಅಥವಾ ಅಭ್ಯರ್ಥಿ ಪರ ಪ್ರಚಾರ ಮಾಡದಿರಲು ಗೀತಾ ನಿರ್ಧಾರಿಸಿದ್ದಾರೆ.