Asianet Suvarna News Asianet Suvarna News

ಜಿಡಿಪಿ 3 ವರ್ಷದಲ್ಲೇ ಕನಿಷ್ಠಕ್ಕೆ: ಚೀನಾಗಿಂತ ಭಾರತ ಕಡಿಮೆ

ಅಪನಗದೀಕರಣದ ಪರಿಣಾಮದ ನಡುವೆ, ಜಿಎಸ್ಟಿ ಜಾರಿಗೂ ಮುನ್ನ ಉತ್ಪಾದನಾ ವಲಯದಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಆದರೆ ಇನ್ನೊಂದೆಡೆ, ಸತತ ಎರಡು ತ್ರೈಮಾಸಿಕ ಅವಧಿಯಲ್ಲಿ, ಚೀನಾದ ಜಿಡಿಪಿ ಕೂಡ ಮಂದಗತಿಯಲ್ಲಿ ಸಾಗಿದೆ. ಜನವರಿ-ಮಾರ್ಚ್ ಮತ್ತು ಏಪ್ರಿಲ್-ಜೂನ್ನಲ್ಲಿ ಚೀನಾದ ಜಿಡಿಪಿ ಶೇ. 6.9ರಷ್ಟು ದಾಖಲಾಗಿದೆ.

GDP growth slips to 5 in April June

ನವದೆಹಲಿ(ಆ.31): ನೋಟು ಅಪನಗದೀಕರಣದ ದತ್ತಾಂಶ ಬಿಡುಗಡೆಯಾಗಿ ಪ್ರತಿಪಕ್ಷಗಳಿಂದ ತೀವ್ರ ಟೀಕೆ ಎದುರಿಸುತ್ತಿರುವ ಬೆನ್ನಲ್ಲೇ, ಜಿಡಿಪಿ (ಸಮಗ್ರ ಆರ್ಥಿಕ ಬೆಳವಣಿಗೆ ದರ) ವಿಷಯದಲ್ಲಿ ಮತ್ತೊಮ್ಮೆ ಕೇಂದ್ರ ಸರ್ಕಾರ ಮುಜುಗರ ಎದುರಿಸುವಂತಾಗಿದೆ. ಏಪ್ರಿಲ್-ಜೂನ್ ತ್ರೈಮಾಸಿಕ ಅವಧಿಯಲ್ಲಿ ದೇಶದ ಆರ್ಥಿಕ ಪ್ರಗತಿ ಮೂರು ವರ್ಷಗಳಲ್ಲೇ ದಾಖಲೆಯ ಇಳಿಕೆ ಕಂಡು ಬಂದಿದ್ದು, ಜಿಡಿಪಿ ದರ ಶೇ. 5.7ರಷ್ಟು ದಾಖಲಾಗಿದೆ.

ಅಪನಗದೀಕರಣದ ಪರಿಣಾಮದ ನಡುವೆ, ಜಿಎಸ್‌ಟಿ ಜಾರಿಗೂ ಮುನ್ನ ಉತ್ಪಾದನಾ ವಲಯದಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಆದರೆ ಇನ್ನೊಂದೆಡೆ, ಸತತ ಎರಡು ತ್ರೈಮಾಸಿಕ ಅವಧಿಯಲ್ಲಿ, ಚೀನಾದ ಜಿಡಿಪಿ ಕೂಡ ಮಂದಗತಿಯಲ್ಲಿ ಸಾಗಿದೆ. ಜನವರಿ-ಮಾರ್ಚ್ ಮತ್ತು ಏಪ್ರಿಲ್-ಜೂನ್‌ನಲ್ಲಿ ಚೀನಾದ ಜಿಡಿಪಿ ಶೇ. 6.9ರಷ್ಟು ದಾಖಲಾಗಿದೆ. ಉತ್ಪಾದನಾ ವಲಯದಲ್ಲಿ ಜಿವಿಎ ವರ್ಷದಲ್ಲೇ ಶೇ. 10.7ರಿಂದ ಶೇ. 1.2ಕ್ಕೆ ತೀವ್ರ ಕುಸಿತ ಕಂಡಿದೆ. ಜು.೧ರಿಂದ ಜಿಎಸ್‌ಟಿ ಜಾರಿಗೊಳ್ಳುತ್ತಿದ್ದುದರಿಂದ, ಉತ್ಪಾದಕರು ತಮ್ಮಲ್ಲಿ ದಾಸ್ತಾನಿದ್ದ ಸರಕುಗಳನ್ನು ಖಾಲಿ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಇದೇ ಈ ಕುಸಿತಕ್ಕೆ ಕಾರಣವೆಂದು ಭಾವಿಸಲಾಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ನೋಟು ಅಪನಗದೀಕರಣದ ಬಳಿಕ ಆರ್ಥಿಕ ಚಟುವಟಿಕೆಗಳಿಗೆ ಪರಿಣಾಮ ಬೀರಿದೆ ಎನ್ನಲಾಗಿದ್ದು, ಜನವರಿ-ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ ಶೇ. 6.1ಕ್ಕೆ ಇಳಿಕೆಯಾಗಿದ್ದ ಜಿಡಿಪಿ, ಕಳೆದ ಮೂರು ತಿಂಗಳಲ್ಲಿ ಶೇ. 5.7ಕ್ಕೆ ಇಳಿಕೆಯಾಗಿ ಮತ್ತಷ್ಟು ಕುಸಿತ ಕಂಡಿದೆ.

Follow Us:
Download App:
  • android
  • ios