ಗೌರಿ ಹತ್ಯೆಯಾದ 15 ನಿಮಿಷದ ಬಳಿಕ ಈ ಸ್ಕೂಟರ್ ತೆರಳಿದೆ. ಆದರೆ, ಸ್ಕೂಟರ್'ನಲ್ಲಿದ್ದಾತ ಯಾವುದೇ ಹೆಲ್ಮೆಟ್ ಮತ್ತು ಜ್ಯಾಕೆಟ್ ಧರಿಸಿರಲಿಲ್ಲ ಎಂಬುದು ಕುತೂಹಲದ ವಿಚಾರವಾಗಿದೆ. ಯಾಕೆಂದರೆ, ಗೌರಿ ಹತ್ಯೆಗೂ ಹಂತಕನು ಯಾರಿಗೂ ಅನುಮಾನ ಬರಬಾರದೆಂದು ಹೆಲ್ಮೆಟ್ ಮತ್ತು ಜ್ಯಾಕೆಟ್ ಧರಿಸಿದ್ದಿರುವ ಸಾಧ್ಯತೆ ಇದೆ. ಹತ್ಯೆ ಬಳಿಕ, ಆತ ಹೆಲ್ಮೆಟ್ ಮತ್ತು ಜಾಕೆಟ್ ತೆಗೆದುಹಾಕಿದ್ದಿರುವ ಶಂಕೆ ಇದೆ.

ಬೆಂಗಳೂರು(ಸೆ. 08): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಹಂತಕರ ಸುಳಿವು ಸಿಕ್ಕಿದೆಯಾ? ಹಂತಕರ ಬೇಟೆಯಲ್ಲಿ ಮಹತ್ವದ ಟ್ವಿಸ್ಟ್ ಸಿಕ್ಕಿರುವ ವಿಚಾರ ಬೆಳಕಿಗೆ ಬಂದಿದೆ. ರಾಜರಾಜೇಶ್ವರಿ ನಗರದ ಗೌರಿ ಲಂಕೇಶ್ ಅವರ ನಿವಾಸದ ಸನಿಹವಿರುವ ಗ್ಲೋಬಲ್ ಕಾಲೇಜು ಬಳಿ ಅನುಮಾನಾಸ್ಪದವಾಗಿ ಸ್ಕೂಟರ್'ವೊಂದು ತೆರಳಿರುವ ದೃಶ್ಯ ಪತ್ತೆಯಾಗಿದೆ. ಗೌರಿ ಹತ್ಯೆಯಾದ 15 ನಿಮಿಷದ ಬಳಿಕ ಈ ಸ್ಕೂಟರ್ ತೆರಳಿದೆ. ಆದರೆ, ಸ್ಕೂಟರ್'ನಲ್ಲಿದ್ದಾತ ಯಾವುದೇ ಹೆಲ್ಮೆಟ್ ಮತ್ತು ಜ್ಯಾಕೆಟ್ ಧರಿಸಿರಲಿಲ್ಲ ಎಂಬುದು ಕುತೂಹಲದ ವಿಚಾರವಾಗಿದೆ. ಯಾಕೆಂದರೆ, ಗೌರಿ ಹತ್ಯೆಗೂ ಹಂತಕನು ಯಾರಿಗೂ ಅನುಮಾನ ಬರಬಾರದೆಂದು ಹೆಲ್ಮೆಟ್ ಮತ್ತು ಜ್ಯಾಕೆಟ್ ಧರಿಸಿದ್ದಿರುವ ಸಾಧ್ಯತೆ ಇದೆ. ಹತ್ಯೆ ಬಳಿಕ, ಆತ ಹೆಲ್ಮೆಟ್ ಮತ್ತು ಜಾಕೆಟ್ ತೆಗೆದುಹಾಕಿದ್ದಿರುವ ಶಂಕೆ ಇದೆ.

ಇದೇ ವೇಳೆ, ಗೌರಿ ಲಂಕೇಶ್ ಹತ್ಯೆಯಾದ ಕೆಲ ಹೊತ್ತಿನಲ್ಲಿ ಆರ್.ಆರ್.ನಗರದಲ್ಲೇ ಮೊಬೈಲ್'ವೊಂದು ಸ್ವಿಚ್ ಆನ್ ಆಗಿದೆ. ಕೆಲವೇ ನಿಮಿಷಗಳಲ್ಲಿ ಸ್ವಿಚ್ ಆಫ್ ಆಗಿದೆ. ಇದೂ ಕೂಡ ಪೊಲೀಸರಿಗೆ ಅನುಮಾನ ಮೂಡಿಸಿದೆ.

ಘಟನೆ ನಡೆದ ಸ್ಥಳ ಹಾಗೂ ಸಮಯದಲ್ಲಿ ಏನಾದರೂ ಸುಳಿವು ಸಿಗಬಹುದೆಂದು ಪೊಲೀಸರು ಅವಿರತವಾಗಿ ಶೋಧದಲ್ಲಿದ್ದಾರೆ. ಸದ್ಯ ಈ ಎರಡು ಸುಳಿವುಗಳು ಪೊಲೀಸರಿಗೆ ಸಿಕ್ಕಿದೆ. ಸ್ಕೂಟರ್ ಮತ್ತು ಆ ಮೊಬೈಲ್ ನಂಬರ್'ನ ಮಾಹಿತಿಯನ್ನು ತನಿಖಾ ತಂಡವು ಕಲೆಹಾಕುತ್ತಿದೆ.