ಬರ್ತ್ ಡೇ ಸಂಭ್ರಮದಲ್ಲಿದ್ದ ಕಾಲೇಜು ಯುವತಿಗೆ ಶಾಕ್! 

ಬೆಂಗಳೂರು (ಏ. 20): ಬರ್ತ್ ಡೇ ಸಂಭ್ರಮದಲ್ಲಿದ್ದ ಕಾಲೇಜು ಯುವತಿಗೆ ಶಾಕ್!

ಬರ್ತ್ ಡೇ ಆಚರಣೆ ವೇಳೆ ಸ್ಪಾರ್ಕರ್ ಹಚ್ಚುವಾಗ ಗ್ಯಾಸ್ ಬಲೂನ್ ಸ್ಫೋಟಗೊಂಡು ಎನ್.ಆರ್. ಮೊಹಲ್ಲಾದ ನಿವಾಸಿ ಸಂಜನಾಗೆ ಗಂಭೀರ ಗಾಯವಾಗಿದೆ. 
 ಖಾಸಗಿ‌ ಹೋಟೆಲ್ ನಲ್ಲಿ ಬರ್ತಡೇ ಆಚರಿಸುವಾಗ ಸ್ಪಾರ್ಕರ್ ಕ್ಯಾಂಡಲ್ ಹಚ್ಚುವಾಗ ಗ್ಯಾಸ್ ಬಲೂನ್ ಸಿಡಿದು ಸಂಜನಾ ಮುಖ ಮತ್ತು ಕೈಗೆ ಗಾಯಗಳಾಗಿವೆ. 

ಖಾಸಗಿ ಆಸ್ಪತ್ರೆಯಲ್ಲಿ ಸಂಜನಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ವೈರಲ್ ಆಗಿದೆ.