ಜೆಡಿಎಸ್ ಶಾಸಕ ಜಮೀರ್ ಅಹಮದ್ ಆಪ್ತ, ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಮಾಡಿ ಕಿಡ್ನ್ಯಾಪ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು(ಎ.01): ಜೆಡಿಎಸ್ ಶಾಸಕ ಜಮೀರ್ ಅಹಮದ್ ಆಪ್ತ, ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಮಾಡಿ ಕಿಡ್ನ್ಯಾಪ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಜೆಡಿಎಸ್ ಶಾಸಕ ಜಮೀರ್ ಅಹಮದ್ ಆಪ್ತ ಗಂಗಾಧರ್ ಮೇಲೆ ಗ್ಯಾಂಗ್ ಒಂದು ಹನಿಟ್ರ್ಯಾಪ್ ಬಲೆ ಬೀಸಿತ್ತು. ಜ್ಯೋತಿ ಎಂಬ ಹೆಸರಿನ ಮೂಲಕ ಪರಿಚಯ ಮಾಡಿಕೊಂಡಿದ್ದ ಯುವತಿಯೊಬ್ಬಳು ತಾನು ಖಾಸಗಿ ಬ್ಯಾಂಕ್ ಮ್ಯಾನೇಜರ್ ಎಂದು ಕರೆ ಮಾಡಿ ನಂಬಿಸಿದ್ದಳು. ಇವರ ಈ ಫೋನ್ ಮಾತುಕತೆ 15 ದಿನಗಳ ಕಾಲ ನಡೆದಿತ್ತು. ಇವರ ಆಟ ತಿಳಿಯದ ಗಂಗಾಧರ್ ಆಕೆಯನ್ನು ನಂಬಿದ್ದ.
ಇದನ್ನೇ ಬಳಸಿಕೊಂಡ ಗ್ಯಾಂಗ್ ಗಂಗಾಧರ್'ನನ್ನು ಕಳೆದ ವಾರ ಬಾರ್ ಒಂದರ ಭೇಟಿಯಾಗಲು ಕರೆದಿತ್ತು. ಬಳಿಕ ಅವರಲ್ಲಿದ್ದ ಮೂರು ಉಂಗುರ, ಒಂದು ಸರ ಕಸಿದುಕೊಂಡಿದ್ದಲ್ಲದೆ, ಬ್ಯಾಟರಾಯನಪುರದಿಂದ ಬಿಡದಿಗೆ ಕರೆದೊಯ್ದು ಮನೆಯೊಂದರಲ್ಲಿ ಬೆತ್ತಲಾಗಿಸಿ ಬಚ್ಚಿಟ್ಟಿದ್ದರು. ಇಷ್ಟೇ ಅಲ್ಲದೆ ಉದ್ಯಮಿಯ ಗೆಳೆಯನ ಮೂಲಕ 10 ಲಕ್ಷವನ್ನೂ ತರಿಸಿಕೊಂಡಿದ್ದರು.
ಸದ್ಯ ಪೊಲೀಸರು ಈ ಆರೋಪಿಗಳನ್ನು ಪತ್ತೆ ಹಚ್ಚ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಮಂಜುನಾಥ, ಮಹದೇವ, ಮಹೇಶ್, ಸ್ವಾಮಿ, ಜಯಂತಿ ಮತ್ತು ರುಕ್ಮಿಣಿ ಎಂದು ಗುರುತಿಸಲಾಗಿದೆ.
