ಮಧ್ಯಪ್ರದೇಶದ ಶಿಯಾಪುರ್ ಜಿಲ್ಲೆಯ ಹಳ್ಳಿಯೊಂದರ ರೈತರಿಗೆ ಗಾಂಧಿ ಚಿತ್ರವಿಲ್ಲದ 2 ಸಾವಿರ ರುಪಾಯಿಯ ನೋಟುಗಳು ಬ್ಯಾಂಕ್ ನಿಂದಲೇ ದೊರೆತಿವೆ. ಅವು ನಕಲಿ ಎಂದು ಗಾಬರಿಗೊಂಡ ರೈತರು ನೋಟು ಪಡೆದಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಹೋಗಿ ಕೇಳಿದ್ದಾರೆ.
ಭೋಪಾಲ್(ಜ.05): ಮಧ್ಯಪ್ರದೇಶದ ಶಿಯಾಪುರ್ ಜಿಲ್ಲೆಯ ಹಳ್ಳಿಯೊಂದರ ರೈತರಿಗೆ ಗಾಂಧಿ ಚಿತ್ರವಿಲ್ಲದ 2 ಸಾವಿರ ರುಪಾಯಿಯ ನೋಟುಗಳು ಬ್ಯಾಂಕ್ ನಿಂದಲೇ ದೊರೆತಿವೆ. ಅವು ನಕಲಿ ಎಂದು ಗಾಬರಿಗೊಂಡ ರೈತರು ನೋಟು ಪಡೆದಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಹೋಗಿ ಕೇಳಿದ್ದಾರೆ.
ನೋಟುಗಳನ್ನು ಹಿಂಪಡೆದ ಅಧಿಕಾರಿಗಳು, ಆ ನೋಟುಗಳು ಅಸಲಿ ಎಂದಿದ್ದಾರೆ. ಮುದ್ರಣ ದೋಷದ ಕಾರಣಕ್ಕೆ ಗಾಂಧಿ ಚಿತ್ರವೇ ನೋಟಿನಿಂದ ನಾಪತ್ತೆಯಾಗಿತ್ತು. ಈ ರೀತಿ ಸಮಸ್ಯೆಯಿರುವ ಅಸಲಿ ನೋಟುಗಳು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಾಲ್ತಿಯಲ್ಲಿವೆ ಎಂದು ಬ್ಯಾಂಕ್ ಹಾಗೂ ಪೊಲೀಸ್ ಮೂಲಗಳು ತಿಳಿಸಿವೆ.
ಎಸ್ ಬಿಐನಿಂದ ನೋಟನ್ನು ಪಡೆಯುವಾಗ ಸರಿಯಾಗಿ ಗಮನಿಸದ ರೈತರೊಬ್ಬರು, ಮಾರುಕಟ್ಟೆಗೆ ತೆರಳಿದ್ದಾರೆ. ಅಲ್ಲಿ ಮತ್ತೊಬ್ಬ ರೈತರು ಈ ಸಮಸ್ಯೆಯನ್ನು ಹೇಳಿದ್ದಾರೆ. ಆ ದೋಷವನ್ನು ಗಮನಿಸಿದ ರೈತರ ಬಳಿ ಅಂಥದ್ದೇ ಎರಡು ನೋಟುಗಳಿದ್ದವಂತೆ. ಆ ನಂತರ ಇಬ್ಬರೂ ರೈತರು ಬ್ಯಾಂಕ್ ಶಾಖೆಗೆ ತೆರಳಿ ದೋಷಪೂರಿತ ನೋಟುಗಳನ್ನು ಬದಲಿಸಿಕೊಂಡಿದ್ದಾರೆ.
