Asianet Suvarna News Asianet Suvarna News

ತೈಲ ಟ್ಯಾಂಕರ್ ಸ್ಫೋಟ : 60 ಮಂದಿ ಸಾವು

ತೈಲ ಟ್ಯಾಂಕರ್ ವಾಹನವೊಂದಕ್ಕೆ ಡಿಕ್ಕಿ ಹೊಡೆದು ಸ್ಫೋಟಗೊಂಡ ಪರಿಣಾಮ 60 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಾಂಗೋದಲ್ಲಿ  ನಡೆದಿದೆ. 

Fuel Tank Exploded 60 Dead
Author
Bengaluru, First Published Oct 7, 2018, 12:42 PM IST
  • Facebook
  • Twitter
  • Whatsapp

ಕಿನ್ಶಾಸಾ: ತೈಲ ಟ್ಯಾಂಕರ್ ವಾಹನವೊಂದಕ್ಕೆ ಡಿಕ್ಕಿ ಹೊಡೆದು ಸ್ಫೋಟಗೊಂಡ ಪರಿಣಾಮ 60 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಾಂಗೋದಲ್ಲಿ  ನಡೆದಿದೆ. ಈ ಬೆಂಕಿಯ ಕೆನ್ನಾಲಿಗೆಯಲ್ಲಿ 100 ಕ್ಕೂ  ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಕಾಂಗೋ ರಾಜಧಾನಿ ಕಿನ್ಶಾಸಾ ನಗರಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಕಾಂಗೋದ ಕೇಂದ್ರೀಯ ಪ್ರಾಂತ್ಯದ ಹಂಗಾಮಿ ಗವರ್ನರ್ ಅಟೋ ಮತಬ್ವಾನಾ ತಿಳಿಸಿದ್ದಾರೆ. 

ವಾಹನ ಮತ್ತು ತೈಲ ತುಂಬಿದ ಟ್ಯಾಂಕರ್ ನಡುವಿನ ಡಿಕ್ಕಿಯಿಂದಾಗಿ ಉದ್ಭವಿಸಿದ ಬೆಂಕಿ ಸುತ್ತಮುತ್ತಲಿದ್ದ ಮನೆಗಳಿಗೆ ವ್ಯಾಪಿಸಿ, ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

Follow Us:
Download App:
  • android
  • ios