ಸದ್ಯದಲ್ಲೇ ಪ್ರಯಾಣಿಕರಿಗೆ ಬಿಎಂಟಿಸಿ ಶಾಕ್

Fuel price hike: BMTC may up ticket fare soon
Highlights

ಸದ್ಯದಲ್ಲೇ ಪ್ರಯಾಣಿಕರಿಗೆ  ಬೆಂಗಳೂರು ಸಾರಿಗೆ ಸಂಸ್ಥೆ ಶಾಕ್ ನೀಡಲಿದೆ. ವಾರ್ಷಿಕವಾಗಿ 225 ಕೋಟಿ ರೂಪಾಯಿ ನಷ್ಟದಲ್ಲಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ನಿಗಮ ಟಿಕೇಟ್ ದರ ಹೆಚ್ಚಳ ಮಾಡಲು ಮುಂದಾಗಿದೆ. 
 

ಬೆಂಗಳೂರು :  ಸದ್ಯದಲ್ಲೇ ಪ್ರಯಾಣಿಕರಿಗೆ  ಬೆಂಗಳೂರು ಸಾರಿಗೆ ಸಂಸ್ಥೆ ಶಾಕ್ ನೀಡಲಿದೆ. ವಾರ್ಷಿಕವಾಗಿ 225 ಕೋಟಿ ರೂಪಾಯಿ ನಷ್ಟದಲ್ಲಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ನಿಗಮ ಟಿಕೇಟ್ ದರ ಹೆಚ್ಚಳ ಮಾಡಲು ಮುಂದಾಗಿದೆ. 

ಇನ್ನು ದಿನದಿಂದ ದಿನಕ್ಕೆ ಡೀಸೆಲ್ ದರವೂ ಕೂಡ ಹೆಚ್ಚಳವಾಗುತ್ತಿದ್ದು, ಬಿಎಂಟಿಸಿಗೆ ತಿಂಗಳಿಗೆ 6 ಕೋಟಿಯಷ್ಟು ಹೆಚ್ಚುವರಿ ಹೊರೆಯಾಗಿದೆ. ಇದರಿಂದ ಬಿಎಂಟಿಸಿ ನಷ್ಟವನ್ನು ಕಡಿಮೆ ಮಾಡುವ ಪ್ರಯತ್ನ ಕೈಮೀರಿ ಹೋಗಿದೆ. ಆದ್ದರಿಂದ ಶೀಘ್ರದಲ್ಲೇ ಬಿಎಂಟಿಸಿ ದರ ಪರಿಷ್ಕರಣೆ ಆಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಅಲ್ಲದೇ ಕೂಡಲೆ ಟಿಕೇಟ್ ದರ ಹೆಚ್ಚಳ ಮಾಡಿ ಇಲ್ಲವೇ ನಷ್ಟ ಭರಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಲಿದ್ದಾರೆ. ಬಿಎಂಟಿಸಿ ನಿಗಮ ನಡೆಯಬೇಕು ಎಂದರೆ ಟಿಕೇಟ್ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಬಿಎಂಟಿಸಿ ಸಂಸ್ಥೆಯ ಉನ್ನತ ಮೂಲಗಳು ಸುವರ್ಣ ನ್ಯೂಸ್ ಗೆ ಮಾಹಿತಿ ನೀಡಿವೆ. 

loader