ನಂಜನಗೂಡು-ಗುಂಡ್ಲುಪೇಟೆ ಉಪಕದನದ ಕಾವು ದಿನದಿಂದ ದಿನಕ್ಕೇ ಏರುತ್ತಿದೆ. ಇಂದಿನಿಂದ ಸಿಎಂ ಸಿದ್ದರಾಮಯ್ಯ ಅಖಾಡಕ್ಕೆ ಇಳಿಯುತ್ತಿದ್ದಾರೆ. ಇತ್ತ ಪೈಪೋಟಿಗೆ ಬಿದ್ದವರಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅಂಡ್ ಟೀಮ್ ಮೈಸೂರಲ್ಲೇ  ಜಾಂಡಾ ಹೂಡಿದೆ. ಇನ್ನು ಸಿಎಂ ಸಿದ್ಧರಾಮಯ್ಯರೊಂದಿಗೆ ಏಪ್ರಿಲ್ 7 ರವರೆಗೆ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಕ್ಕೆ ಸಂಪೂರ್ಣ ಸರ್ಕಾರವೇ ಶಿಫ್ಟ್ ಆಗಲಿದೆ. ೨೦ ಸಚಿವರ ಜೊತೆ ಸಿಎಂ ಒಂದು ವಾರ ಕಾಲ‌ ನಂಜನಗೂಡು ಮತ್ತು‌ ಗುಂಡ್ಲುಪೇಟೆಯಲ್ಲೇ ಬೀಡು ಬಿಡಲಿದ್ದಾರೆ.

ಮೈಸೂರು(ಮಾ.31): ನಂಜನಗೂಡು-ಗುಂಡ್ಲುಪೇಟೆ ಉಪಕದನದ ಕಾವು ದಿನದಿಂದ ದಿನಕ್ಕೇ ಏರುತ್ತಿದೆ. ಇಂದಿನಿಂದ ಸಿಎಂ ಸಿದ್ದರಾಮಯ್ಯ ಅಖಾಡಕ್ಕೆ ಇಳಿಯುತ್ತಿದ್ದಾರೆ. ಇತ್ತ ಪೈಪೋಟಿಗೆ ಬಿದ್ದವರಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅಂಡ್ ಟೀಮ್ ಮೈಸೂರಲ್ಲೇ ಜಾಂಡಾ ಹೂಡಿದೆ. ಇನ್ನು ಸಿಎಂ ಸಿದ್ಧರಾಮಯ್ಯರೊಂದಿಗೆ ಏಪ್ರಿಲ್ 7 ರವರೆಗೆ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಕ್ಕೆ ಸಂಪೂರ್ಣ ಸರ್ಕಾರವೇ ಶಿಫ್ಟ್ ಆಗಲಿದೆ. ೨೦ ಸಚಿವರ ಜೊತೆ ಸಿಎಂ ಒಂದು ವಾರ ಕಾಲ‌ ನಂಜನಗೂಡು ಮತ್ತು‌ ಗುಂಡ್ಲುಪೇಟೆಯಲ್ಲೇ ಬೀಡು ಬಿಡಲಿದ್ದಾರೆ.

ಉಪಸಮರದ ಕಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಟ್ರಿ! 

ನಿನ್ನೆ ರಾತ್ರಿಯೇ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಬಂದಾಗಿದೆ. ಇಂದಿನಿಂದ ಮುಖ್ಯಮಂತ್ರಿಗಳು ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆ ಪ್ರಾಚಾರ ಕಣಕ್ಕೆ ಧುಮುಕಿದರೆ ವಿಶ್ರಾಂತಿ ತೆಗೆದುಕೊಳ್ಳುವುದು ಏಪ್ರಿಲ್ 8ರ ನಂತರವೇ.

ಸಿಎಂ ಪ್ರಚಾರ ಮಾರ್ಗ

ಇಂದು ಇಡೀ ದಿನ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಕಳಲೇ ಕೇಶವ್ ಮೂರ್ತಿ ಪರ ಸಿಎಂ ಪ್ರಚಾರ ನಡೆಸಲಿದ್ದಾರೆ. ಗೋಳೂರು, ಚಿನ್ನದ ಹುಂಡಿ, ವೀರದೇವನಪುರ, ಬದನವಾಳು, ದೇವನೂರು, ಚಿಕ್ಕ ಕವಲಂದೆ, ದೊಡ್ಡ ಕವಲಂದೆ, ನೇರಳೆ, ಹೆಡತಲೆ, ಹೆಮ್ಮರಗಾಲ, ಬಡಗಯ್ಯನ ಹುಂಡಿ, ಮಲ್ಲಹಳ್ಳಿ, ಮಲ್ಲಹಳ್ಳಿ, ತರದಲೆ-ಕೂಡ್ಲಾಪುರ, ಹುಣಸನಾಳು, ಕುರಹಟ್ಟಿ, ಸಿಂಧುವಳ್ಳಿ, ಉಪ್ಪಿನಹಳ್ಳಿ, ಹೊರಳವಾಡಿ ಗ್ರಾಮಗಳಲ್ಲಿ‌ ಕ್ಯಾಂಪೇನ್ ನಡೆಸಲಿದ್ದಾರೆ.

ಇತ್ತ ಗುಂಡ್ಲುಪೇಟೆಯ ಕೈ ಅಭ್ಯರ್ಥಿ ಗೀತಾ ಮಹದೇವ್ ಪ್ರಸಾದ್ ಪರ ಬೇಗೂರು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ ಸಚಿವರಾದ ಎಂ.ಬಿ. ಪಾಟೀಲ್ ಹಾಗೂ ಎ. ಮಂಜು ಪ್ರಚಾರ ನಡೆಸಿದರೆ, ಸಚಿವ ಡಿ.ಕೆ. ಶಿವಕುಮಾರ್ ಕೂಡ ಸಭೆ ನಡೆಸಲಿದ್ದರೆ.

ಹಾಗೇನೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಹರವೆ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ..ಹಂಗಳ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್. ಈಶ್ವರಪ್ಪ ಮತಬೇಟೆ ನಡೆಸಲಿದ್ದಾರೆ.

ಒಟ್ಟಾರೆ ಇಂದಿನಿಂದ ಎರಡೂ ಉಪಚುನಾವಣಾ ಕ್ಷೇತ್ರದ ಪ್ರಚಾರ ಕಾವು ಜೋರಾಗಲಿದೆ.

ವರದಿ: ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್.