ಬೆಂಗಳೂರು :  ಪೆಟ್ರೋಲ್ ದರ 90 ರುಪಾಯಿಯ ಗಡಿ ಸಮೀಪಿಸುತ್ತಿದ್ದಂತೆಯೇ ಅದಕ್ಕೆ ‘ಬಂಗಾರದ ಬೆಲೆ’ ಬಂದಿದೆ. ಅದಕ್ಕೇ ಏನೋ ಎಂಬಂತೆ ಈಗ ಮದುವೆಗಳಲ್ಲಿ ಪೆಟ್ರೋಲ್ ಕಾಣಿಕೆ ಕೊಡುವ ಖಯಾಲಿ ಆರಂಭವಾಗಿದೆ. 

ತಮಿಳುನಾಡಿನ ಕಡಲೂರಿನಲ್ಲಿ ಇಳಂಚೆಳಿಯನ್ ಹಾಗೂ ಕನಿಮೋಳಿ ಅವರ  ಮದುವೆ ಭಾನುವಾರ ನೆರವೇರಿತು. 

ಈ ವೇಳೆ ವಧೂ-ವರರ ಸ್ನೇಹಿತರು ಕ್ಯಾನ್‌ನಲ್ಲಿ 5  ಲೀಟರ್ ಪೆಟ್ರೋಲ್ ತುಂಬಿಸಿ ಅದನ್ನು ಕಾಣಿಕೆಯಾಗಿ ನೀಡಿದರು.