ಪ್ಲೋಗಾಸ್ಟಲ್ ದಾವೋಲಾಸ್(ಮೇ.10): ಫ್ರಾನ್ಸ್ ನ ಬ್ರಿಟಾನಿ ಸಮೀಪವಿರುವ ಹಳ್ಳಿಯೊಂದರಲ್ಲಿ ಕಲ್ಲಿನ ಮೇಲೆ ಕೆತ್ತಿರುವ ಅಕ್ಷರಗಳನ್ನು ಸರಿಯಾಗಿ ಗ್ರಹಿಸಿದವರಿಗಾಗಿ ಸೂಕ್ತ ಬಹುಮಾನ ಘೋಷಿಸಲಾಗಿದೆ.

ಇಲ್ಲಿನ ಪ್ಲೋಗಾಸ್ಟಲ್ ದಾವೋಲಾಸ್ ಹಳ್ಳಿಯ ಸುಮುದ್ರ ತೀರದಲ್ಲಿ ಅಪರೂಪದ ಕಲ್ಲೊಂದು ಪತ್ತೆಯಾಗಿದೆ. ಆದರೆ ಈ ಕಲ್ಲಿನ ಮೇಲೆ ಕೆತ್ತಲಾಗಿರುವ ಬರಹಗಳನ್ನು ಗ್ರಹಿಸಲು ತಜ್ಞರಿಗೂ ಸಾಧ್ಯವಾಗಿಲ್ಲ.

ಈ ಹಿನ್ನೆಲೆಯಲ್ಲಿ ಈ ಬರಗಳನ್ನು ಪತ್ತೆ ಹಚ್ಚಿದವರಿಗೆ 2,000 ಯುರೋ (2,250 ಡಾಲರ್) ಬಹುಮಾನ ಘೋಷಿಸಲಾಗಿದೆ.  

ಸುಮಾರು 230 ವರ್ಷಗಳಿಗೂ ಪುರಾತನವಾದ ಈ ಕಲ್ಲಿನ ಮೇಲೆ ಕೆತ್ತಲಾಗಿರುವ ಬರಹ ಸದ್ಯ ಬ್ರಿಟಿಷ್ ಮ್ಯೂಸಿಯಂನಲ್ಲಿರುವ ಈಜಿಪ್ಟ್ ನ ರೊಸೆಟ್ಟಾ ಸ್ಟೋನ್ ಬರಹಕ್ಕೆ ಹೋಲಿಕೆಯಾಗುತ್ತದೆ ಎನ್ನಾಲಾಗಿದೆ.