ಪ್ರತಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಜ್ಞಾನಗಳಿಸುವ ಸ್ವಾತಂತ್ರ್ಯವನ್ನು ನೀಡಬೇಕು, ಅದು ಚಾಲ್ತಿಯಲ್ಲಿರುವ ವೈಚಾರಿಕ ಹಾಗೂ  ಸಾಮಾಜಿಕ ಸಂಪ್ರದಾಯಗಳಿಗಿಂತ ಭಿನ್ನವಾಗಿದ್ದರೂ ಸರಿ. ನಾವು ಸ್ವಾತಂತ್ರ್ಯವನ್ನು ಕಾಪಾಡುವ ಅಗತ್ಯವಿದೆ, ಎಂದು ಮನಮೋಹನ್ ಸಿಂಗ್ ಪ್ರೆಸಿಡೆನ್ಸಿ ವಿವಿಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

ಕೋಲ್ಕತ್ತಾ (ಜ.20): ಭಾರತದ ವಿಶ್ವವಿದ್ಯಾಲಯಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಿವುಟಿ ಹಾಕಲಾಗುತ್ತಿದೆಯೆಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರತಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಜ್ಞಾನಗಳಿಸುವ ಸ್ವಾತಂತ್ರ್ಯವನ್ನು ನೀಡಬೇಕು, ಅದು ಚಾಲ್ತಿಯಲ್ಲಿರುವ ವೈಚಾರಿಕ ಹಾಗೂ ಸಾಮಾಜಿಕ ಸಂಪ್ರದಾಯಗಳಿಗಿಂತ ಭಿನ್ನವಾಗಿದ್ದರೂ ಸರಿ. ನಾವು ಸ್ವಾತಂತ್ರ್ಯವನ್ನು ಕಾಪಾಡುವ ಅಗತ್ಯವಿದೆ, ಎಂದು ಮನಮೋಹನ್ ಸಿಂಗ್ ಪ್ರೆಸಿಡೆನ್ಸಿ ವಿವಿಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

ದುರಾದೃಷ್ಟವಶಾತ್, ಭಾರತದ ವಿವಿಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಅಪಾಯದಲ್ಲಿದೆ, ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.

ರಾಷ್ಟ್ರೀಯವಾದದ ಹೆಸರಿನಲ್ಲಿ ದ್ವೇಷವನ್ನು ಬಿತ್ತುವ ಪೃವೃತ್ತಿ ಹೆಚ್ಚಾಗುತ್ತಿದೆಯೆಂದು ಕಳವಳ ವ್ಯಕ್ತಪಡಿಸಿದ ಮನಮೋಹನ್ ಸಿಂಗ್, ಸ್ವತಂತ್ರವಾಗಿ ಆಲೋಚಿಸುವ, ನಿರ್ಭೀತರಾಗಿ ಮಾತನಾಡುವ, ಹಾಗೂ ಭಿನಾಭಿಪ್ರಾಯಗಳನ್ನು ಹೊಸಕಿ ಹಾಕದೇ ಗೌರವಿಸುವುದೇ ನಿಜವಾದ ರಾಷ್ಟ್ರೀಯತೆಯಾಗಿದೆ ಎಂದು ಹೇಳಿದ್ದಾರೆ.