ಯೋಧರ ಬಗ್ಗೆ ದಿಟ್ಟವಾಗಿ ಮಾತನಾಡಿದ ಗುರ್ಮೀತ್ ಕೌರ್’ನನ್ನು ಟೈಮ್ ಮ್ಯಾಗಜಿನ್ 2017 ನೇ ಸಾಲಿನ ಮುಂದಿನ ಪೀಳಿಗೆಯ ಟಾಪ್  10 ನಾಯಕರ ಪಟ್ಟಿಗೆ ಆಯ್ಕೆ ಮಾಡಿದೆ.

ನವದೆಹಲಿ (ಅ.13): ಯೋಧರ ಬಗ್ಗೆ ದಿಟ್ಟವಾಗಿ ಮಾತನಾಡಿದ ಗುರ್ಮೀತ್ ಕೌರ್’ನನ್ನು ಟೈಮ್ ಮ್ಯಾಗಜಿನ್ 2017 ನೇ ಸಾಲಿನ ಮುಂದಿನ ಪೀಳಿಗೆಯ ಟಾಪ್ 10 ನಾಯಕರ ಪಟ್ಟಿಗೆ ಆಯ್ಕೆ ಮಾಡಿದೆ.

ಗುರ್ಮೀತ್ ತಂದೆ ಸೇನಾಧಿಕಾರಿ ಕಾಶ್ಮೀರದಲ್ಲಿ ಪಾಕಿಸ್ತಾನ ಉಗ್ರರ ಗುಂಡಿಗೆ ಬಲಿಯಾದಾಗ ನನ್ನ ತಂದೆಯನ್ನು ಕೊಂದಿದ್ದು ಪಾಕಿಸ್ತಾನವಲ್ಲ, ಬದಲಿಗೆ ಯುದ್ಧ ಎಂದು ಪ್ಲಕಾರ್ಡ್ ಹಿಡಿದು ವಿರೋಧಿಸಿದ್ದರು. ಇದು ದೇಶಾದ್ಯಂತ ಸುದ್ದಿಯಾಯಿತು. ಆಕ್ರೋಶ ವ್ಯಕ್ತವಾಯಿತು. ಗುರ್ಮೀತ್ ಹೇಳಿಕೆಯನ್ನು ಖಂಡಿಸಿ ಎಬಿವಿಪಿ ಸದಸ್ಯರು ದೆಹಲಿ ಯೂನಿವರ್ಸಿಟಿಯ ರಾಮ್’ಜಾಸ್ ಕಾಲೇಜಿನಲ್ಲಿ ಗಲಭೆ ಎಬ್ಬಿಸಿದಾಗ ಅವರ ವಿರುದ್ಧ ಗುರ್ಮೀತ್ ಕೌರ್ ದನಿ ಎತ್ತಿದ್ದರು. ಆಗ ಸುದ್ದಿಯಾಗಿದ್ದರು. ಆನಂತರ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಯಿತು. ಜೀವ ಬೆದರಿಕೆಯನ್ನು ಎದುರಿಸಬೇಕಾಯಿತು.

ಗುರ್ಮೀತ್ ಈಗಲೂ ಮೌನವಾಗಿಲ್ಲ. ದನಿ ಎತ್ತಿದ್ದಾರೆ. ಸ್ವಾತಂತ್ರ ಬಗ್ಗೆ ಪುಸ್ತಕವನ್ನು ಬರೆಯುತ್ತಿದ್ದಾರೆ. ಮುಂದಿನ ವರ್ಷ ಪ್ರಕಟಗೊಳ್ಳಲಿದೆ. ಅವರ ದಿಟ್ಟತನ ನೋಡಿ ನಾವು ಅವರನ್ನು ಮುಂದಿನ 10 ನಾಯಕರ ಪಟ್ಟಿಗೆ ಆಯ್ಕೆ ಮಾಡಿದ್ದೇವೆ ಎಂದು ಟೈಮ್ ಮ್ಯಾಗಜಿನ್ ಹೇಳಿದೆ.