ಇಂದಿರಾ ಕ್ಯಾಂಟೀನ್’ನಲ್ಲಿ ಇಂದು ಮಹಿಳೆಯರಿಗೆ ಫ್ರೀ ಊಟ; ಏನೇನ್ ಸ್ಪೆಷಲ್ ಇದೆ ನೋಡಿ

First Published 8, Mar 2018, 10:38 AM IST
Free Meal to Women in Indira Canteen
Highlights

ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಇಂದು ಇಂದಿರಾ ಕ್ಯಾಂಟೀನ್’ನಲ್ಲಿ ಮಹಿಳೆಯರಿಗೆ ಫ್ರೀ ಊಟ! 

ಬೆಂಗಳೂರು (ಮಾ. 08): ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಇಂದು ಇಂದಿರಾ ಕ್ಯಾಂಟೀನ್’ನಲ್ಲಿ ಮಹಿಳೆಯರಿಗೆ ಫ್ರೀ ಊಟ! 

ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ, ಹಾಗೂ ರಾತ್ರಿ ಊಟವನ್ನು ಉಚಿತವಾಗಿ ನೀಡಲಾಗುತ್ತಿದೆ. ಬೆಳಿಗ್ಗೆ ತಿಂಡಿಗೆ ಬಿಸಿ ಬಿಸಿ ಇಡ್ಲಿ, ಅಥವಾ ವಾಂಗೀಬಾತ್, ಮಧ್ಯಾಹ್ನ ಊಟಕ್ಕೆ ಅನ್ನ, ತರಕಾರಿ ಸಾಂಬಾರ್, ಬಿಸಿ ಬಿಸಿ ಕೀರು, ಪುಳಿಯೊಗರೆ ಸವಿಯಬಹುದಾಗಿದೆ. ರಾತ್ರಿ ಊಟಕ್ಕೆ ಅನ್ನ, ತರಕಾರಿ ಸಾಂಬಾರ್ ಸಲಾಡ್ ಟೊಮೋಟೋ ವೆಜ್ ಪಲಾವ್ ಸವಿಯಬಹುದು. 

ಬಿಬಿಎಂಪಿ 186 ವಾರ್ಡ್’ನ ಇಂದಿರಾ ಕ್ಯಾಂಟೀನ್’ನಲ್ಲಿ ಈ ಆಫರ್ ಇದೆ. ಯಾವುದೇ ಇಂದಿರಾ ಕ್ಯಾಂಟೀನ್’ಗೆ ಹೋದರೂ ಬಿಸಿ ಬಿಸಿಯಾದ, ರುಚಿ ರುಚಿಯಾದ ಊಟ ಮಾಡಬಹುದು. 

loader