ವಿಶ್ವ ವೇದಿಕೆಯಲ್ಲಿ ಭಾರತಕ್ಕೆ ಸಿಕ್ತು ಮತ್ತೊಂದು ಜಯ| ಮಸೂದ್ ಅಜರ್ ಆಸ್ತಿ ಜಪ್ತಿಗೆ ಮುಂದಾದ ಫ್ರಾನ್ಸ್ ಸರ್ಕಾರ| ಜೈಷ್-ಎ-ಮೊಹ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್|

ಪ್ಯಾರಿಸ್(ಮಾ.15): ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಜೈಷ್-ಎ-ಮೊಹ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಆಸ್ತಿ ಜಪ್ತಿಗೆ ಫ್ರಾನ್ಸ್ ಸರ್ಕಾರ ಮುಂದಾಗಿದೆ. 

ಭಾರತದ ಮನವಿಗೆ ಸ್ಪಂದಿಸಿದ್ದ ಫ್ರಾನ್ಸ್ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಫ್ರಾನ್ಸ್ ಮುಂದಾಗಿತ್ತು. ಆದರೆ ಈ ವಿಚಾರದಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಮಸೂದ್ ಅಜರ್ ಆಸ್ತಿಗೆ ಜಪ್ತಿಗೆ ಮುಂದಾಗಿದೆ.

Scroll to load tweet…

ವಿಶ್ವಸಂಸ್ಥೆಯಲ್ಲಿ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಚೀನಾ ಅಡ್ಡಗಾಲು ಹಾಕಿದೆ. ಇದರಿಂದಾಗಿ ಮಸೂದ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವಲ್ಲಿ ಹಿನ್ನಡೆಯಾಗಿದೆ.