ಸುಪ್ರೀಂ ಕೋರ್ಟ್'ನಲ್ಲಿ ಸಲ್ಲಿಸಲಾಗಿರುವ ಸಲಹೆಗಳನ್ನು ಪರಿಗಣಿಸಿ ಆರು ವಾರಗಳೊಳಗೆ ನಿಯಮಾವಳಿಗಳ ಕರುಡು ಪ್ರತಿಯನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾ. ಜೆ,ಎಸ. ಖೆಹರ್ ನೇತ್ರತ್ವದ ಪೀಠವು ಸೂಚಿಸಿದೆ.
ನವದೆಹಲಿ (ಮಾ.30): ಪೊಲೀಸರು ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಆರೋಪಿ ಹಾಗೂ ಸಂತ್ರಸ್ತರ ಹಕ್ಕುಗಳ ಉಲ್ಲಂಘನೆಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಹೊಸ ನಿಯಮಾವಳಿಗಳನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಸುಪ್ರೀಂ ಕೋರ್ಟ್'ನಲ್ಲಿ ಸಲ್ಲಿಸಲಾಗಿರುವ ಸಲಹೆಗಳನ್ನು ಪರಿಗಣಿಸಿ ಆರು ವಾರಗಳೊಳಗೆ ನಿಯಮಾವಳಿಗಳ ಕರುಡು ಪ್ರತಿಯನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾ. ಜೆ,ಎಸ. ಖೆಹರ್ ನೇತ್ರತ್ವದ ಪೀಠವು ಸೂಚಿಸಿದೆ.
ಪ್ರಕರಣದ ತನಿಖೆಯ ಸಂದರ್ಭದಲ್ಲಿ ಪೊಲೀಸರು ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಸಂತ್ರಸ್ತರ ಹಾಗೂ ಆರೋಪಿಗಳ ಹಕ್ಕುಗಳ ಉಲ್ಲಂಘನೆಯಾಗಬಾರದು, ಆ ಕುರಿತು ನಿಯಮಗಳನ್ನು ರೂಪಿಸಬೇಕು, ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ.
ಆ ಕುರಿತು ಕೇಂದ್ರ ಸರ್ಕಾರವು 2010ರಲ್ಲಿ ನಿಯಮಗಳನ್ನು ರೂಪಿಸಿತ್ತು, ಆದರೆ ಇತ್ತೀಚಿಗಿನ ವರ್ಷಗಳಲ್ಲಿ ಇನ್ನೂ ಬಹಳಷ್ಟು ಚರ್ಚೆಗಳು ನಡೆದಿವೆ, ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ವಿಚಾರಕ್ಕೆ ಸಂಬಂಧಿಸಿ ವಕೀಲ ಗೋಪಾಲ್ ಶಂಕರ್ ನಾರಾಯಣ್ ಅಮಿಕಸ್ ಕ್ಯೂರಿಯಾಗಿ ಕೋರ್ಟ್'ಗೆ ಸಹಾಯ ಮಾಡುತ್ತಿದ್ದು, ಈಗಾಗಲೇ ಸಿಬಿಐ ಹಾಗೂ ಗೃಹ ಸಚಿವಾಲಯವು ರೂಪಿಸಿರುವ ನಿಯಮಗಳ ಜತೆಗೆ ಬೇರೆ ಬೇರೆ ದೇಶಗಳಲ್ಲಿರುವ ನಿಯಮಗಳನ್ನು ಅವರು ಅಧ್ಯಯನ ಮಾಡಿದ್ದಾರೆ ಎಂದು ಪ್ರೀಂ ಕೋರ್ಟ್ ಹೇಳಿದೆ.