ಭಾರತೀಯ ಜನತಾ ಪಕ್ಷದ ನಾಯಕ ಸಾಕ್ಷಿ ಮಹಾರಾಜ್ ನೀಡಿರುವ ವಿವಾದಾತ್ಮಕ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ. ಇವರ ಹೇಳಿಕೆ ಪಕ್ಷದ ನಿಲುವನ್ನು ಹೇಳುತ್ತಿಲ್ಲ, ಇದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಬಿಜೆಪಿ ಹೇಳಿದೆ.
ನವದೆಹಲಿ (ಜ.07): ಭಾರತೀಯ ಜನತಾ ಪಕ್ಷದ ನಾಯಕ ಸಾಕ್ಷಿ ಮಹಾರಾಜ್ ನೀಡಿರುವ ವಿವಾದಾತ್ಮಕ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ. ಇವರ ಹೇಳಿಕೆ ಪಕ್ಷದ ನಿಲುವನ್ನು ಹೇಳುತ್ತಿಲ್ಲ, ಇದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಬಿಜೆಪಿ ಹೇಳಿದೆ.
ಚುನಾವಣಾ ‘ಪಂಚ’ ಜನ್ಯ ಮೊಳಗಿದ್ದು ಈ ಸಂದರ್ಬದಲ್ಲಿ ಸಾಕ್ಷಿ ಮಹಾರಾಜ್ ನೀಡಿರುವ ಹೇಳಿಕೆ ಭಾರತೀಯ ಜನತಾ ಪಕ್ಷಕ್ಕೆ ಇರುಸುಮುರುಸು ಉಂಟು ಮಾಡಿದೆ.
ಮಹಿಳೆ ಮಕ್ಕಳನ್ನು ಹೆರುವ ಯಂತ್ರವಲ್ಲ. ನಾಲ್ವರು ಪತ್ನಿಯರು, 40 ಮಕ್ಕಳು, 3 ವಿಚ್ಚೇದನ ಇವೆಲ್ಲಾ ಒಪ್ಪತಕ್ಕದ್ದಲ್ಲ. ಭಾರತದ ಜನಸಂಖ್ಯೆ ಹೆಚ್ಚಾಗಲು ಹಿಂದೂಗಳು ಕಾರಣವಲ್ಲ. ಹಿಂದೂಗಳ ಸಂಖ್ಯೆ ಕಡಿಮೆಯಾದರೆ ದೇಶ ಇಬ್ಭಾಗವಾಗುತ್ತದೆ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದರು. ಈ ಹೇಳಿಕೆ ಒಂದು ಧರ್ಮದವರ ಕೆಂಗಣ್ಣಿಗೆ ಗುರಿಯಾಗಿದೆ.
