ಕೇಪ್‌ಟೌನ್(ಜ.11): ಸಿಂಹಗಳನ್ನು ಸುಮ್ಮ ಸುಮ್ಮನೆ ಕಾಡಿನ ರಾಜ ಅಂತಾ ಕರೆಯಲ್ಲ. ಅವುಗಳ ಗತ್ತು, ಗೈರತ್ತು ಕಂಡ ಎಂತ ಗಂಡೆದೆ ವೀರರೂ ಒಮ್ಮೆ ತಲೆಬಾಗಿ ಬಿಡುತ್ತಾರೆ.

ಇದಕ್ಕೆ ಪುಷ್ಠಿ ಬೇಕಾದರೆ ನೀವು ವಿಡಿಯೋ ನೋಡಲೇಬೇಕು. ಇದು ದಕ್ಷಿಣ ಆಫ್ರಿಕಾದ ಕ್ರಗೇರ್ ನ್ಯಾಶನಲ್ ಪಾರ್ಕ್‌ನಲ್ಲಿ ನಡೆ ಘಟನೆ. ಒಟ್ಟು ನಾಲ್ಕು ಸಿಂಹಗಳು ಹೆದ್ದಾರಿಯಲ್ಲಿ ರಾಜಾರೋಷವಾಗಿ ಓಡಾಡುತ್ತಾ ಇರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಕ್ರಗೇರ್ ನ್ಯಾಶನಲ್ ಪಾರ್ಕ್‌ನ ಹೆದ್ದಾರಿ ಬಳಿ ಏಕಾಏಕಿ ಕಾಣಿಸಿಕೊಂಡ ನಾಲ್ಕು ಸಿಂಹಗಳು ಇಡೀ ರಸ್ತೆಯನ್ನು ಬ್ಲಾಕ್ ಮಾಡಿದ್ದಲ್ಲದೇ, ರಾಜಾರೋಷವಾಗಿ ಹೆಜ್ಜೆ ಹಾಕುತ್ತಾ ಸಾಗುತ್ತಿರುವ ವಿಡಿಯೋ ಇದಾಗಿದೆ.

ಸಿಂಹಗಳ ರಾಜ ನಡಿಗೆ ಪರಿಣಾಮ ಇಡೀ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವಂತೆ ಮಾಡಿದ್ದವು. ಹಲವು ಕಿ.ಮೀ.ಗಳ ವರೆಗೆ ಟ್ರಾಫಿಕ್ ಜಾಮ್ ಆಗಿದ್ದು, ವಾಹನಗಳು ನಿಂತಲ್ಲೇ ನಿಂತಿದ್ದವು.