ಬಿಹಾರ ವಿಧಾನ ಪರಿಷತ್‌ನಲ್ಲಿ ಗುರುವಾರ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಿದ್ದು, ಪಕ್ಷ ವಿಭಜನೆಯಾಗಿದೆ. ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಅಶೋಕ್‌ ಚೌಧರಿ ಸೇರಿದಂತೆ, ಇತರ ಮೂವರು ವಿಧಾನ ಪರಿಷತ್‌ ಸದಸ್ಯರು, ಆಡಳಿತಾರೂಢ ಪಕ್ಷ ಜೆಡಿಯು ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ.

ಪಟನಾ: ಬಿಹಾರ ವಿಧಾನ ಪರಿಷತ್‌ನಲ್ಲಿ ಗುರುವಾರ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಿದ್ದು, ಪಕ್ಷ ವಿಭಜನೆಯಾಗಿದೆ. ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಅಶೋಕ್‌ ಚೌಧರಿ ಸೇರಿದಂತೆ, ಇತರ ಮೂವರು ವಿಧಾನ ಪರಿಷತ್‌ ಸದಸ್ಯರು, ಆಡಳಿತಾರೂಢ ಪಕ್ಷ ಜೆಡಿಯು ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ.

ಅಶೋಕ್‌ ಚೌಧರಿ, ದಿಲೀಪ್‌ ಚೌಧರಿ, ರಾಮಚಂದ್ರ ಭಾರತಿ, ತನ್ವೀರ್‌ ಅಖ್ತರ್‌ ಬುಧವಾರ ಅಧಿಕೃವಾಗಿ ತಮ್ಮನ್ನು ಜೆಡಿಯು ಎಂಎಲ್‌ಸಿಗಳಾಗಿ ಗುರುತಿಸುವಂತೆ ಪರಿಷತ್ತಿನ ಸಭಾಪತಿ ಹಾರೂನ್‌ ರಶೀದ್‌ಗೆ ವಿನಂತಿಸಿದ್ದರು. ಅರ್ಜಿ ಗುರುವಾರ ಸ್ವೀಕರಿಸಲ್ಪಟ್ಟಿದೆ. ಸದನದಲ್ಲಿ ಆರು ಕಾಂಗ್ರೆಸ್‌ ಎಂಎಲ್‌ಸಿಗಳಿದ್ದರು. ನಾಲ್ವರನ್ನೂ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಕೌಕಾಬ್‌ ಖಾದ್ರಿ ತಿಳಿಸಿದ್ದಾರೆ.