ಜನರೇಟರ್ ಆನ್ ಮಾಡಿ ಆದೇ ಕೊಠಡಿಯಲ್ಲಿ ಐವರು ಮಲಗಿದ್ದರು. ಬೆಳಗ್ಗೆಯ ವೇಳೆಗೆ ಜನರೇಟರ್ ಹೊಗೆ ಸೇವಿಸಿ ನಾಲ್ವರು ಮೃತಪಟ್ಟಿದ್ದಾರೆ.
ರಾಯಚೂರು(ಮಾ.17): ಕಾರ್ಬನ್ ಡೈ ಆಕ್ಸೈಡ್ ಹೊಗೆ ಸೇವಿಸಿ ನಾಲ್ವರು ಮೃತಪಟ್ಟ ಘಟನೆ ರಾಯಚೂರಿನ ಲಿಂಗಸಗೂರು ಪಟ್ಟಣದಲ್ಲಿ ನಡೆದಿದೆ.
ಮಂಜುನಾಥ, ಶಿವಕುಮಾರ್, ಮೌಲಾಲಿ ಬಡೆಸಾಬ್, ಶಶಿಕುಮಾರ್ ಮಹಾಂತಪ್ಪ ಯಕರನಾಳ ಮೃತರು. ಮದುವೆ ಸಮಾರಂಭಕ್ಕಾಗಿ ಜನರೇಟರ್ ತರಿಸಲಾಗಿತ್ತು. ಜನರೇಟರ್ ಆನ್ ಮಾಡಿ ಆದೇ ಕೊಠಡಿಯಲ್ಲಿ ಐವರು ಮಲಗಿದ್ದರು. ಬೆಳಗ್ಗೆಯ ವೇಳೆಗೆ ಜನರೇಟರ್ ಹೊಗೆ ಸೇವಿಸಿ ನಾಲ್ವರು ಮೃತಪಟ್ಟಿದ್ದಾರೆ. ಮತ್ತೋರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿಗೀಡದವರೆಲ್ಲ ಲಿಂಗಸಗೂರಿನ ಕರಡಕಲ್ ಮೂಲದವರಾಗಿದ್ದಾರೆ.
