ವಾರಂಗಲ್, [ಜೂ.24]: ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಕರ್‌ ರಾವ್‌ ಅವರ ಪ್ರತಿಕೃತಿ ದಹಿಸಲು ಹೋಗಿ ಬೆಂಕಿ ತಗುಲಿ ಬಿಜೆಪಿ ನಾಲ್ವರು ಕಾರ್ಯಕರ್ತರು ಗಾಯಗೊಂಡಿರುವ ಘಟನೆ ನಡೆದಿದೆ.

9 ತಿಂಗಳ ಹಸುಗೂಸನ್ನು ಅತ್ಯಾಚಾರ ಮಾಡಿ ಹತ್ಯೆಗೈದ ಘಟನೆ ಸಂಬಂಧ ಆರೋಪಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ವಾರಂಗಲ್ನಲ್ಲಿ ಪ್ರತಿಭಟನೆ ಕೈಗೊಂಡಿದ್ದ ವೇಳೆ ಅವಘಡ ಸಂಭವಿಸಿದೆ.

ಪ್ರತಿಭಟನೆ ವೇಳೆ ಕೆಸಿಆರ್ ಪ್ರತಿಕೃತಿಗೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿದ ವೇಳೆ ಬೆಂಕಿ ನಾಲ್ವರು ಕಾರ್ಯಕರ್ತರಿಗೆ ತಗುಲಿದೆ. ಆದ್ರೆ ಶ್ರೀನಿವಾಸ್‌ ಎಂಬ ಬಿಜೆಪಿ ಕಾರ್ಯಕರ್ತನಿಗೆ ಗಂಭೀರ ಗಾಯಗಳಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. 

ವಾರಂಗಲ್ನಲ್ಲಿ ಒಂಬತ್ತು ತಿಂಗಳ ಕಂದಮ್ಮನನ್ನು ಆರೋಪಿಯೊಬ್ಬ ಜೂ. 19ರಂದು ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದ. ಇದನ್ನು ಖಂಡಿಸಿ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಪ್ರತಿಭಟನೆ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.