ಹುಟ್ಟಿದ ದಿನದಂದೇ ಕೊನೆಯುಸಿರೆಳೆದ ಮಾಜಿ ಮುಖ್ಯಮಂತ್ರಿ! ಉತ್ತರಾಖಂಡ್ ಮಾಜಿ ಸಿಎಂ ಎನ್.ಡಿ ತಿವಾರಿ ನಿಧನ! ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕ! ಆಂಧ್ರದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದ ತಿವಾರಿ

ನವದೆಹಲಿ(ಅ.17): ದೀರ್ಘಾವಧಿಯ ಅನಾರೋಗ್ಯದಿಂದ ಬಳಲುತ್ತಿದ್ದ ಉತ್ತರಾಖಂಡ್ ಮಾಜಿ ಸಿಎಂ ಎನ್. ಡಿ ತಿವಾರಿ ತಮ್ಮ 93 ನೇ ಜನ್ಮದಿನದಂದೇ ಕೊನೆಯುಸಿರೆಳೆದಿದ್ದಾರೆ. 

ಪತ್ನಿ ಉಜ್ವಲಾ ಹಾಗೂ ಪುತ್ರ ರೋಹಿತ್ ಶೇಖರ್ ಅವರನ್ನು ಎನ್. ಡಿ ತಿವಾರಿ ಅಗಲಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಕಳೆದ ಜುಲೈ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಳೆದ ಕೆಲವು ತಿಂಗಳುಗಳಿಂದ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಎನ್. ಡಿ ತಿವಾರಿ ಆಂಧ್ರಪ್ರದೇಶದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.

Scroll to load tweet…

ಇನ್ನು ತಿವಾರಿ ನಿಧನಕ್ಕೆ ಪ್ರಾಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಎನ್.ಡಿ ತಿವಾರಿ ರಾಜಕೀಯ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಅನನ್ಯವಾದುದು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.