ಬ್ಲಾಕ್ ಅಂಡ್ ವೈಟ್ ದಂಧೆಯಲ್ಲಿ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅಳಿಯ ಪ್ರವೀಣ್ ಕುಮಾರ್ ನನ್ನು ಬಂಧಿಸಲಾಗಿದೆ.
ಬೆಂಗಳೂರು (ಏ.02): ಬ್ಲಾಕ್ ಅಂಡ್ ವೈಟ್ ದಂಧೆಯಲ್ಲಿ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅಳಿಯ ಪ್ರವೀಣ್ ಕುಮಾರ್ ನನ್ನು ಬಂಧಿಸಲಾಗಿದೆ.
ನಿನ್ನೆ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ್ವಿ. ದಾಳಿ ಮಾಡಿದ ಬಳಿಕ ಎಲ್ಲಾ 14 ಆರೋಪಿಗಳನ್ನು ಬಂಧಿಸಿದ್ದೇವೆ. ದಾಳಿಯಲ್ಲಿ 9.10 ಕೋಟಿ ಹಣವನ್ನು ವಶ ಪಡಿಸಿಕೊಳ್ಳಲಾಗಿದೆ. ಹಳೆಯ ಪ್ರಕರಣದ ಬಗ್ಗೆಯೂ ತನಿಖೆ ನಡೆಯುತ್ತಾ ಇದೆ
ಯಾವ ರೀತಿಯಲ್ಲಿ ಹಣ ಬದಲಾವಣೆ ಮಾಡ್ತಾ ಇದ್ರು ಅಂತ ತನಿಖೆ ನಡೆಯಬೇಕು. ದೊಡ್ಡ ಜಾಲದೊಂದಿಗೆ ಇವರುಗಳ ಲಿಂಕ್ ಇದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರವಿ ಹೇಳಿದ್ದಾರೆ.
ದಾಳಿಯ ನಂತರ ಪೊಲೀಸರ ಮೇಲೆ ಒತ್ತಡ ಬೀರಿತ್ತಾ ಎಂದಿದ್ದಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ರವಿ ಮುಗುಳ್ನಗೆ ಬೀರಿ ಹೋದರು. ಒತ್ತಡದ ಬಗ್ಗೆ ಪ್ರತಿಕ್ರಿಯೆ ನೀಡಲಿಲ್ಲ.
ದಾಳಿಯ ವೇಳೆ ಹಳೆ ನೋಟಿನ ಜೊತೆಗೆ 2 ಕಾರು ಹಾಗೂ 15 ಮೊಬೈಲ್ ಫೋನ್ ವಶ ಕ್ಕೆ ತೆಗೆದುಕೊಳ್ಳಲಾಗಿದೆ. 2 ಕಾರುಗಳಲ್ಲಿ ಹಣವನ್ನ ಇಡಲಾಗಿತ್ತು ಎನ್ನಲಾಗಿದೆ. ಸದ್ಯ ಜೆ.ಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
