ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡ ಇಸ್ರೋ ಮಾಜಿ ಅಧ್ಯಕ್ಷ! ಮಾಧವನ್ ನಾಯರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಅಮಿತ್ ಶಾ! ‘ಪ್ರಧಾನಿ ಮೋದಿ ತತ್ವದಲ್ಲಿ ನಂಬಿಕೆ ಇಟ್ಟು ಪಕ್ಷಕ್ಕೆ ಸೇರ್ಪಡೆ’! ಮಾಧವನ್ ನಾಯರ್ ಸೇರಿದಂತೆ ಇತರ ಮೂವರು ಬಿಜೆಪಿಗೆ ಸೇರ್ಪಡೆ
ತಿರುವನಂತಪುರಂ(ಅ.28): ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕೇರಳ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಸೇರಿ ಐವರು ವ್ಯಕ್ತಿಗಳನ್ನು ಕಮಲ ಪಾಳಯಕ್ಕೆ ಸ್ವಾಗತಿಸಿದ್ದಾರೆ.
ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್, ತಿರುವಾಂಕೂರು ದೇವಸ್ವಮ್ ಬೋರ್ಡ್ (ಟಿಡಿಬಿ) ಮಾಜಿ ಅಧ್ಯಕ್ಷ ಮತ್ತು ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಜಿ. ರಾಮನ್ ನಾಯರ್ ಬಿಜೆಪಿಗೆ ಅಧಿಕೃತ ಸೇರ್ಪಡೆಯಾಗಿದ್ದಾರೆ.
ಈ ವೇಳೆ ಮಾತನಾಡಿದ ಮಾಧವನ್ ನಾಯರ್, ಭಾರತವನ್ನು ಅಭಿವೃದ್ಧಿಪಡಿಸುವ ಪ್ರಧಾನಿ ನರೇಂದ್ರ ಮೋದಿ ಅವರ ತತ್ತ್ವದಲ್ಲಿ ಆಸಕ್ತಿ ಹೊಂದಿ ಬಿಜೆಪಿಗೆ ಸೇಪರ್ಪಡೆಯಾಗುತ್ತಿದ್ದೇನೆ ಎಂದು ಹೇಳಿದರು.
ಶಬರಿಮಲೆ ವಿಚಾರದಲ್ಲಿ ಬಿಜೆಪಿ ನಿಲುವು ಸರಿಯಾಗಿದ್ದು, ತಾವು ಪಕ್ಷದ ಕಾರ್ಯಗಳಲ್ಲಿ ಕೈಜೋಡಿಸುವುದಾಗಿ ಜಿ.ರಾಮನ್ ನಾಯರ್ ಈ ಸಂದರ್ಭದಲ್ಲಿ ಹೇಳಿದರು.
