Asianet Suvarna News Asianet Suvarna News

ಅಕ್ರಮ ಗಣಿಗಾರಿಕೆ: ಮಾಜಿ ಸಚಿವೆ ಜಯಂತಿ ನಟರಾಜನ್ ವಿರುದ್ಧ ಪ್ರಕರಣ ದಾಖಲಿಸಿದ ಸಿಬಿಐ

ಯುಪಿಎ ಸರ್ಕಾರಾವಧಿಯಲ್ಲಿ ಪರಿಸರ ಖಾತೆ ಸಚಿವರಾಗಿದ್ದ ಜಯಂತಿ ನಟರಾಜನ್ ವಿರುದ್ಧ ಪ್ರಕರಣ ದಾಖಲಿಸಿರುವ ಸಿಬಿಐ, ಅವರ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದೆ. ಪರಿಸರ ಇಲಾಖೆ ಮಂತ್ರಿಯಾಗಿದ್ದಾಗ ನಿಯಮಗಳನ್ನು ಉಲ್ಲಂಘಿಸಿ ಅರಣ್ಯ ಭೂಮಿಯಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಜಯಂತಿ ನಟರಾಜನ್ ವಿರುದ್ಧ ಪ್ರಕರಣವನ್ನು ದಾಖಲಿಸಿದೆ.

Former environment minister Jayanthi Natarajan booked by CBI

ನವದೆಹಲಿ: ಯುಪಿಎ ಸರ್ಕಾರಾವಧಿಯಲ್ಲಿ ಪರಿಸರ ಖಾತೆ ಸಚಿವರಾಗಿದ್ದ ಜಯಂತಿ ನಟರಾಜನ್ ವಿರುದ್ಧ ಪ್ರಕರಣ ದಾಖಲಿಸಿರುವ ಸಿಬಿಐ, ಅವರ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದೆ.

ಪರಿಸರ ಇಲಾಖೆ ಮಂತ್ರಿಯಾಗಿದ್ದಾಗ ನಿಯಮಗಳನ್ನು ಉಲ್ಲಂಘಿಸಿ ಅರಣ್ಯ ಭೂಮಿಯಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಜಯಂತಿ ನಟರಾಜನ್ ವಿರುದ್ಧ ಪ್ರಕರಣವನ್ನು ದಾಖಲಿಸಿದೆ.

ಜಯಂತಿ ನಟರಾಜನ್ ಅಲ್ಲದೇ ಆ ಸಂದರ್ಭದಲ್ಲಿ ಎಲೆಕ್ಟ್ರೋಸ್ಟೀಲ್ ಕಾಸ್ಟಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಉಮಂಗ್ ಕೇಜ್ರಿವಾಲ್ ಮತ್ತಿತ್ತರರ ವಿರುದ್ಧವೂ ಪ್ರಕರಣವನ್ನು ದಾಖಲಿಸಲಾಗಿದೆ.

ಅರಣ್ಯ ಸಂರಕ್ಷಣೆ ಕಾಯ್ದೆ-2012ನ್ನು ಉಲ್ಲಂಘಿಸಿ ಜಾರ್ಖಂಡಿನ ಸಿಂಗ್’ಭೂಮ್ ಜಿಲ್ಲೆಯ ಸಾರಾಂದ ಅರಣ್ಯ ಪ್ರದೇಶದಲ್ಲಿ ಎಲೆಕ್ಟ್ರೋಸ್ಟೀಲ್ ಕಾಸ್ಟಿಂಗ್ ಕಂಪನಿಗೆ ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಜೈರಾಮ್ ರಮೇಶ್ ಸಚಿವರಾಗಿದ್ದಾಗ ಆ ಯೋಜನೆಗೆ ಅನುಮತಿ ನಿರಾಕರಿಸಿದ್ದರು, ಆದರೆ ಜಯಂತಿ ನಟರಾಜ್ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅದೇ ಯೋಜನೆಗೆ ಅನುಮತಿ ನೀಡಿದ್ದಾರೆ ಎಂದು ಎಫ್ಐಆರ್’ನಲ್ಲಿ ಹೇಳಲಾಗಿದೆ.

ಅನುಮತಿ ನೀಡುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಮಹಾ ನಿರ್ದೇಶಕರ ಸಲಹೆ ಹಾಗೂ ಸುಪ್ರೀಂ ಕೋರ್ಟಿನ ನಿರ್ದೆಶನಗಳನ್ನು ಕೂಡಾ ಕಡೆಗಣಿಸಲಾಗಿದೆಯೆಂದು ಹೇಳಲಾಗಿದೆ.

ದೈತ್ಯ ಕಂಪನಿಗಳಾದ ವೇದಾಂತ ಹಾಗೂ ಅದಾನಿ ಕಂಪನಿಗಳ ಯೋಜನೆಗಳಿಗೆ ಅನುಮತಿ ನೀಡದಿರಲು ರಾಹುಲ್ ಗಾಂಧಿ ಒತ್ತಡ ಹಾಕುತ್ತಿದ್ದರೆಂದು ಆರೋಪಿಸಿ, 2015ರಲ್ಲಿ ಜಯಂತಿ ನಟರಾಜನ್ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು.

Follow Us:
Download App:
  • android
  • ios