Asianet Suvarna News Asianet Suvarna News

ಸೇನಾ ಮುಖ್ಯಸ್ಥರನ್ನೇ ಗೂಂಡಾ ಎಂದ ಕಾಂಗ್ರೆಸ್ಸಿಗ

ಸೇನಾ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ‘ಬೀದಿ ಗೂಂಡಾ' ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಆಪಾದಿಸಿ ಕಾಂಗ್ರೆಸ್‌ ನಾಯಕ ಸಂದೀಪ್‌ ದೀಕ್ಷಿತ್‌ ಹೇಳಿದುದು ಭಾನುವಾರ ಭಾರೀ ವಿವಾದಕ್ಕೆ ಕಾರಣವಾಗಿದೆ. ವಿವಾದವಾಗುತ್ತಿದ್ದಂತೆ ಹೇಳಿಕೆಯ ಬಗ್ಗೆ ಯೂ-ಟರ್ನ್‌ ತೆಗೆದುಕೊಂಡ ದೀಕ್ಷಿತ್‌, ಎಚ್ಚರಿಕೆಯಿಂದ ಹೇಳಿಕೆ ನೀಡಬಹುದಾಗಿತ್ತು ಎಂದಿದ್ದಾರೆ. ದೀಕ್ಷಿತ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಕಿರಣ್‌ ರಿಜಿಜು, ‘ಕಾಂಗ್ರೆಸ್‌ನೊಳಗೆ ಏನು ನಡೆಯು ತ್ತಿದೆ? ಸೇನಾ ಮುಖ್ಯಸ್ಥರನ್ನು ಬೀದಿ ಗೂಂಡಾ ಎನ್ನಲು ಕಾಂಗ್ರೆಸ್‌ ಎಷ್ಟುಧೈರ್ಯ?' ಎಂದು ಟ್ವೀಟ್‌ ಮಾಡಿದ್ದಾರೆ.

Former Congress MP Sandeep Dikshit calls Army chief sadak ka goonda apologises later
  • Facebook
  • Twitter
  • Whatsapp

ನವದೆಹಲಿ(ಜೂ.12): ಸೇನಾ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ‘ಬೀದಿ ಗೂಂಡಾ' ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಆಪಾದಿಸಿ ಕಾಂಗ್ರೆಸ್‌ ನಾಯಕ ಸಂದೀಪ್‌ ದೀಕ್ಷಿತ್‌ ಹೇಳಿದುದು ಭಾನುವಾರ ಭಾರೀ ವಿವಾದಕ್ಕೆ ಕಾರಣವಾಗಿದೆ. ವಿವಾದವಾಗುತ್ತಿದ್ದಂತೆ ಹೇಳಿಕೆಯ ಬಗ್ಗೆ ಯೂ-ಟರ್ನ್‌ ತೆಗೆದುಕೊಂಡ ದೀಕ್ಷಿತ್‌, ಎಚ್ಚರಿಕೆಯಿಂದ ಹೇಳಿಕೆ ನೀಡಬಹುದಾಗಿತ್ತು ಎಂದಿದ್ದಾರೆ. ದೀಕ್ಷಿತ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಕಿರಣ್‌ ರಿಜಿಜು, ‘ಕಾಂಗ್ರೆಸ್‌ನೊಳಗೆ ಏನು ನಡೆಯು ತ್ತಿದೆ? ಸೇನಾ ಮುಖ್ಯಸ್ಥರನ್ನು ಬೀದಿ ಗೂಂಡಾ ಎನ್ನಲು ಕಾಂಗ್ರೆಸ್‌ ಎಷ್ಟುಧೈರ್ಯ?' ಎಂದು ಟ್ವೀಟ್‌ ಮಾಡಿದ್ದಾರೆ.

ಇನ್ನೊಂದೆಡೆಯಲ್ಲಿ ಸೇನಾ ಮುಖ್ಯಸ್ಥರ ಹೇಳಿಕೆಗೆ ಪ್ರಕಾಶ್‌ ಕಾರಟ್‌ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಸೇನಾ ಮುಖ್ಯಸ್ಥರ ಹೇಳಿಕೆಯು ಅನಗತ್ಯ ಪ್ರಚೋದನೆ ನೀಡುವಂತದ್ದು ಮತ್ತು ಹಿರಿಯ ಸೇನಾ ಮುಖ್ಯಸ್ಥರಿಗೆ ಯೋಗ್ಯವಾದುದಲ್ಲ ಎಂದು ಕಾರಟ್‌ ಲೇಖನ ವೊಂದರಲ್ಲಿ ಉಲ್ಲೇಖಿಸಿದ್ದಾರೆ. ಸಂದರ್ಶನವೊಂದರಲ್ಲಿ ಕಾಶ್ಮೀರ ಸಮಸ್ಯೆ ಬಗ್ಗೆ ಮಾತನಾಡಿದ್ದ ಸೇನಾ ಮುಖ್ಯಸ್ಥ ಜ. ರಾವತ್‌, ಪ್ರತಿಭಟನಕಾರರು ತಮ್ಮತ್ತ ಕಲ್ಲೆಸೆಯುವುದಕ್ಕೆ ಬದಲು ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದರೆ ತಮ್ಮ ಕಾರ್ಯ ಸುಲಭವಾಗುತಿತ್ತು ಎಂದು ಹೇಳಿಕೆ ನೀಡಿದ್ದರು.

Follow Us:
Download App:
  • android
  • ios