ಮಂಡ್ಯ :  ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಿದ ಬಳಿಕ ಮಂಡ್ಯದಲ್ಲಿ ಕೈ ನಾಯಕ ಸಿದ್ದರಾಮಯ್ಯ ಹೊಸ ರಾಜಕೀಯ ದಾಳಕ್ಕೆ ಮುಂದಾಗಿದ್ದಾರೆ. 

"

ಜೆಡಿಎಸ್ ಬಿಗ್ ಶಾಕ್ ನೀಡಲು ಸಿದ್ದರಾಮಯ್ಯ ಮೆಗಾ ಪ್ಲಾನ್ ಮಾಡಿದ್ದು, ಕಾಂಗ್ರೆಸ್ ಕೈ ಹಿಡಿಯುವಂತೆ ಸುಮಲತಾಗೆ ಮನವಿ ಮಾಡಿದ್ದಾರೆ. ಮಂಡ್ಯ ಸಂಸದೆ ಸುಮಲತಾಗೆ ಕಾಂಗ್ರೆಸ್ ನಿಂದ ಆಹ್ವಾನ ನೀಡಿದ್ದು, ಲೋಕಸಭೆಯಲ್ಲಿ ನೀವು ಉತ್ತಮ ಸಂಸದೀಯ ಪಟುವಾಗಿ ಬೆಳೆಯುವ ಎಲ್ಲ ಅವಕಾಶಗಳಿವೆ. ಕಾಂಗ್ರೆಸ್ ನಿಮಗೆ ಲೋಕಸಭೆಯಲ್ಲಿ ಉತ್ತಮ ಅವಕಾಶ ಕಲ್ಪಿಸಿಕೊಡಬಹುದು.  ಕಾಂಗ್ರೆಸ್ ನಲ್ಲಿ ರಾಜಕೀಯವಾಗಿ ಬೆಳೆಯಲು ಸಾಕಷ್ಟು ಅವಕಾಶವಿದ್ದು, ಕೈಗೆ ಬೆಂಬಲ ನೀಡುವಂತೆ ಆಹ್ವಾನಿಸಿದ್ದಾರೆ.

ಅಂಬರೀಷ್ ಕೂಡ ಕಾಂಗ್ರೆಸ್ ನಲ್ಲಿದ್ದರು. ಹೀಗಾಗಿ ನೀವು ಕಾಂಗ್ರೆಸ್ ಸೇರಿದರೆ ಉತ್ತಮ ಎಂದು ಸುಮಲತಾ ಜೊತೆಗೆ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. 

ಲೋಕಸಭಾ ಚುನಾವಣೆ : ಮಂಡ್ಯ ಫಲಿತಾಂಶದ ಬಗ್ಗೆ EVM ಮೇಲೆ ದಟ್ಟ ಅನುಮಾನ

ಮೈತ್ರಿ ಅನಿವಾರ್ಯತೆಯಿಂದ ಮಂಡ್ಯದಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಕೊಡಲು ಸಾಧ್ಯವಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಉಸ್ತುವಾರಿಯನ್ನ ನಿಮಗೆ ವಹಿಸಿಕೊಡ್ತೇವೆ ಎಂದು ಆಫರ್ ನೀಡಿದ್ದಾರೆ.  

ಈ ಮೂಲಕ ಸುಮಲತಾ ಅವರನ್ನು ಕಾಂಗ್ರೆಸ್ ಗೆ ಕರೆತಂದು ಜೆಡಿಎಸ್ ಗೆ ಟಾಂಗ್ ಕೊಡಲು ಪ್ಲಾನ್ ಮಾಡಿದ್ದಾರೆ. ಈ ಮೂಲಕ ಮತ್ತೆ ಮಂಡ್ಯದಲ್ಲಿ ಕೈ ಬೆಳೆಸಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.