ಬೆಂಗಳೂರು(ಸೆ.21): ಕೃಷ್ಣ ರಾಜ ಸಾಗರ ಕರ್ನಾಟಕದ ಆಸ್ತಿ ಈ ರಾಜ್ಯದ ಆಸ್ತಿಯನ್ನು ಬೇರೊಂದು ಸಂಸ್ಥೆಗೆ ಹಸ್ತಾಂತರಿಸಬೇಕಾದ್ದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಸಂಬಂಧಿಸಿದಂತೆ ಮಾತನಾಡಿದ ಎಸ್.ಎಂ.ಕೃಷ್ಣ, ಈ ರಾಜ್ಯದ ಆಸ್ತಿಯನ್ನು ಬೇರೊಂದು ಸಂಸ್ಥೆಗೆ ಹಸ್ತಾಂತರಿಸಬೇಕಾದ್ರೆ ಸಂವಿಧಾನದ ಪ್ರಕಾರ ಅದಕ್ಕೆ ಅದರದ್ದೇ ಆದ ನಿಯಮಗಳಿವೆ. ಸಂವಿಧಾನದ ನಿಯಮಗಳನ್ನು ಎತ್ತಿ ಹಿಡಿಯಬೇಕಾದ ಸರ್ವೋಚ್ಛ ನ್ಯಾಯಾಲಯವೇ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಇದೊಂದು ತಿಳಿಗೇಡಿ ತೀರ್ಪು ಎಂದಿರುವ ಅವರು, ಸುಪ್ರೀಂಕೋರ್ಟ್ನ ಸಂವಿಧಾನಿಕ ಪೀಠವೇ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕು. ತೀರ್ಪನ್ನು ಮರುಪರಿಶೀಲಿಸಬೇಕು ಎಂದಿದ್ದಾರೆ.
