ಕಳೆದ ಹಲವು ದಿನಗಳಿಂದ ಕಾಯಿಲೆಪೀಡಿತರಾಗಿದ್ದ ಜೋಗಿಂದರ್ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 20ನೇ ವಯಸ್ಸಿನಲ್ಲಿಯೇ ಪೊಲೀಸ್ ಇಲಾಖೆಗೆ ಸೇರಿದ ಜೋಗಿಂದರ್ ಸಿಂಗ್, ಮಾಜಿ ಪ್ರಧಾನಿ ದೇವೇಗೌಡರ ಅಕಾರವಯಲ್ಲಿ ಸಿಬಿಐ ನಿರ್ದೇಶರಾಗಿದ್ದರು.
ನವದೆಹಲಿ(ಫೆ.04): ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ಅಕಾರಾವಯಲ್ಲಿ ಸಿಬಿಐ ನಿರ್ದೇಶಕರಾಗಿದ್ದ ಕರ್ನಾಟಕ ಕೇಡರ್‌ನ ಐಪಿಎಸ್ ಅಕಾರಿ ಜೋಗಿಂದರ್ ಸಿಂಗ್ ಅವರು ನಿಧನರಾಗಿದ್ದಾರೆ.
‘‘ಸಿಬಿಐನ ಮಾಜಿ ನಿರ್ದೇಶಕ ಸರ್ದಾರ್ ಜೋಗಿಂದರ್ ಸಿಂಗ್ ಅಸುನೀಗಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಂತಿಮ ಸಂಸ್ಕಾರ ಶನಿವಾರ ಉತ್ತರ ದೆಹಲಿಯ ಲೋಯಲ್ಲಿ ನಡೆಯಲಿದೆ,’’ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಟ್ವೀಟ್ ಮಾಡಿದ್ದಾರೆ. ಕಳೆದ ಹಲವು ದಿನಗಳಿಂದ ಕಾಯಿಲೆಪೀಡಿತರಾಗಿದ್ದ ಜೋಗಿಂದರ್ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 20ನೇ ವಯಸ್ಸಿನಲ್ಲಿಯೇ ಪೊಲೀಸ್ ಇಲಾಖೆಗೆ ಸೇರಿದ ಜೋಗಿಂದರ್ ಸಿಂಗ್, ಮಾಜಿ ಪ್ರಧಾನಿ ದೇವೇಗೌಡರ ಅಕಾರವಯಲ್ಲಿ ಸಿಬಿಐ ನಿರ್ದೇಶರಾಗಿದ್ದರು. ಈ ವೇಳೆ, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದ ಬೋೆರ್ಸ್, ಬಿಹಾರದ ಮೇವು ಹಗರಣ, ಜೆಎಂಎಂ ಸಂಸದನ ಲಂಚ ಹಗರಣ, 130 ಕೋಟಿ ವೌಲ್ಯದ ಯೂರಿಯಾ ಮತ್ತು ಟೆಲಿಕಾಮ್ ಸೇರಿದಂತೆ ಇನ್ನಿತರ ಪ್ರಕರಣಗಳ ತನಿಖೆ ನಡೆಸಿದ್ದರು.
