ತಮ್ಮ ಪತಿ ಹೆಸರಿನಲ್ಲಿರುವ ‘ಜಿಯಾ ಚಾರಿಟಬಲ್ ಟ್ರಸ್ಟ್’ನ ಕೋಟ್ಯಂತರ ರು. ದೇಣಿಗೆ ಹಣ ದುರ್ಬಳಕೆ ಮಾಡಿಕೊಂಡ ಪ್ರಕರಣದಲ್ಲಿ ಈ ಶಿಕ್ಷೆ ವಿಧಿಸಲಾಗಿದೆ. ಇನ್ನೊಂದು ಭ್ರಷ್ಟಾಚಾರ ಪ್ರಕರಣದಲ್ಲಿ ಈಗಾಗಲೇ ಜಿಯಾ ಶಿಕ್ಷೆ ವಿಧಿಸಲಾಗಿದ್ದು, ಅವರು ಜೈಲಿನಲ್ಲಿದ್ದಾರೆ.
ಢಾಕಾ (ಬಾಂಗ್ಲಾದೇಶ): ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾಗೆ (73) ಇಲ್ಲಿನ ವಿಶೇಷ ನ್ಯಾಯಾಲಯ ಸೋಮವಾರ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ತಮ್ಮ ಪತಿ ಹೆಸರಿನಲ್ಲಿರುವ ‘ಜಿಯಾ ಚಾರಿಟಬಲ್ ಟ್ರಸ್ಟ್’ನ ಕೋಟ್ಯಂತರ ರು. ದೇಣಿಗೆ ಹಣ ದುರ್ಬಳಕೆ ಮಾಡಿಕೊಂಡ ಪ್ರಕರಣದಲ್ಲಿ ಈ ಶಿಕ್ಷೆ ವಿಧಿಸಲಾಗಿದೆ. ಇನ್ನೊಂದು ಭ್ರಷ್ಟಾಚಾರ ಪ್ರಕರಣದಲ್ಲಿ ಈಗಾಗಲೇ ಜಿಯಾ ಶಿಕ್ಷೆ ವಿಧಿಸಲಾಗಿದ್ದು, ಅವರು ಜೈಲಿನಲ್ಲಿದ್ದಾರೆ.
ಮುಂದಿನ ಡಿಸೆಂಬರ್‌ನಲ್ಲಿ ಸಂಸತ್ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಹೊರಬಿದ್ದ ಈ ತೀರ್ಪು ಅವರ ಪಾಲಿಗೆ ಬಹುದೊಡ್ಡ ಹೊಡೆತ ಎನ್ನಲಾಗಿದೆ.