ಕುಡಿದ ಅಮಲಿನಲ್ಲಿದ್ದ ವಿದೇಶಿ ಪ್ರಜೆಗಳು ಸಂಜೆ ವೇಳೆ ಸ್ನೇಹಿತೆ ಮನೆಯಿಂದ ಮನೆಗೆ ಹೋಗುತ್ತಿದ್ದ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿ ಯಾರಿಗೂ ಹೇಳದಂತೆ ಬೆದರಿಕೆಯೊಡ್ಡಿದ್ದರು. ಬಾಲಕಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದು ಇಬ್ಬರು ಆರೋಪಿಗಳನ್ನ ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ. ಪೊಕ್ಸೊ ಕಾಯ್ದೆ, ಐಪಿಸಿ ಸೆಕ್ಷನ್ 376, ಐಪಿಸಿ 506ರ ಅಡಿ‌ ಕೆ.ಆರ್ ಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ

ಬೆಂಗಳೂರು(ಅ.28): ಬೆಂಗಳೂರಲ್ಲಿ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಕಾರಿನಲ್ಲಿ ಮನೆಗೆ ಡ್ರಾಪ್ ಕೊಡುವ ನೆಪದಲ್ಲಿ ಅಪ್ರಾಪ್ತೆಯನ್ನು ಕರೆದೊಯ್ದು ವಿದೇಶಿ ಪ್ರಜೆಗಳು ಅತ್ಯಾಚಾರವೆಸಗಿದ್ದಾರೆ. ಅತ್ಯಾಚಾರವೆಸಗಿದ್ದ ಅಪ್ಘಾನಿಸ್ತಾನ ಮೂಲದ ಮುಜತಾಬ್ ಜಲಾಲ್, ಇರಾಕ್​​​ನ ಕರಮ್ ಅಬ್ದುಲ್ ಅಹಮದ್ ಬಂಧಿಸಲಾಗಿದೆ.