ವಿದೇಶಾಂಗ ಸಚಿವಾಲಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಚಿವೆ ಸುಷ್ಮಾ ಸ್ವರಾಜ್ ಗಮನಕ್ಕೆ ಟ್ವೀಟ್ ಮಾಡಿ ಹೇಳಿದರೂ ಸಾಕು, ತ್ವರಿತವಾಗಿ ಸಮಸ್ಯೆ ಬಗೆ ಹರಿಸಲು ಕ್ರಮ ಕೈಗೊಳ್ಳುತ್ತಾರೆ. ಈ ಬಾರಿ ಸಮಸ್ಯೆ ಬಗೆ ಹರಿಸುವುದರೊಂದಿಗೆ, ಯುವಕನೊಬ್ಬನಿಗೆ ದೇಶಾಭಿಮಾನದ ಪಾಠವನ್ನೂ ಹೇಳಿದ್ದಾರೆ.

ಹೊಸದಿಲ್ಲಿ:ವಿದೇಶಾಂಗ ಸಚಿವಾಲಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಚಿವೆ ಸುಷ್ಮಾ ಸ್ವರಾಜ್ ಗಮನಕ್ಕೆ ಟ್ವೀಟ್ ಮಾಡಿ ಹೇಳಿದರೂ ಸಾಕು, ತ್ವರಿತವಾಗಿ ಸಮಸ್ಯೆ ಬಗೆ ಹರಿಸಲು ಕ್ರಮ ಕೈಗೊಳ್ಳುತ್ತಾರೆ. ಈ ಬಾರಿ ಸಮಸ್ಯೆ ಬಗೆ ಹರಿಸುವುದರೊಂದಿಗೆ, ಯುವಕನೊಬ್ಬನಿಗೆ ದೇಶಾಭಿಮಾನದ ಪಾಠವನ್ನೂ ಹೇಳಿದ್ದಾರೆ.

ಫಿಲಿಪೈನ್ಸ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಶೇಖ್ ಅತೀಖ್ ಎಂಬ ವಿದ್ಯಾರ್ಥಿ, 'ಅನಾರೋಗ್ಯದಿಂದ ಬಳಲುತ್ತಿದ್ದು, ದೇಶಕ್ಕೆ ಮರಳಬೇಕಾಗಿದೆ. ಆದರೆ, ಪಾಸ್‌ಪೋರ್ಟ್ ಡ್ಯಾಮೇಜ್ ಆಗಿದ್ದು, ಹೊಸತನ್ನು ಪಡೆಯಲು ಅರ್ಜಿ ಸಲ್ಲಿಸಿದ್ದೇನೆ. ಇನ್ನೂ ಬಂದಿಲ್ಲ, ದಯಮಾಡಿ ಸಹಕರಿಸಿ,' ಎಂದು ಆಗ್ರಹಿಸಿದ್ದರು.

ಟ್ವೀಟ್ ನೋಡಿದ ಸುಷ್ಮಾ, ಆ ವಿದ್ಯಾರ್ಥಿ ಪ್ರೊಫೈಲ್‌ನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ದ ಹೆಮ್ಮೆ ಮುಸ್ಲಿಂ ವಿದ್ಯಾರ್ಥಿ, ಎಂದು ಬರೆದುಕೊಂಡಿದ್ದನ್ನು ಗಮನಿಸಿದ್ದಾರೆ. ತಕ್ಷಣವೇ ವಿದ್ಯಾರ್ಥಿಗೆ ಪ್ರತಿಕ್ರಿಯೆ ನೀಡಿ, 'ಪಾಕ್ ಆಕ್ರಮಿತ ಕಾಶ್ಮೀರ' ಎಂಬ ಸ್ಥಳ ಭಾರತದಲ್ಲಿಲ್ಲ. ನೀವು ಕಾಶ್ಮೀರದವರೇ ಆಗಿದ್ದರೆ, ಸಹಕರಿಸುವೆ,' ಎಂದು ಪ್ರತ್ಯುತ್ತರ ನೀಡಿದ್ದಾರೆ. 

Scroll to load tweet…

ತಕ್ಷಣವೇ ತಮ್ಮ ಪ್ರೊಫೈಲ್ ಸರಿ ಮಾಡಿಕೊಂಡಿದ್ದಾನೆ ವಿದ್ಯಾರ್ಥಿ. ನಂತರ ಆತನಿಗೆ ಉತ್ತರಿಸಿದ ಮೇಡಮ್, ಪ್ರೊಫೈಲ್ ಸರಿಪಡಿಸಿಕೊಂಡಿದ್ದಕ್ಕೆ ಖುಷಿಯಾಗಿದೆ ಹೇಳಿ, ಸಂಬಂಧಿಸಿದ ಅಧಿಕಾರಿಗೆ ಅಗತ್ಯ ನೆರವು ನೀಡುವಂತೆ, ಸೂಚಿಸಿದ್ದಾರೆ.

Scroll to load tweet…