ನವದೆಹಲಿ(ಜೂ.04): ಸಂಸತ್ತಿನ ಎರಡೂ ಸದನಗಳ ಸದಸ್ಯರಾಗಿರದ ವಿದೇಶಾಂಗ ಸಚಿವ  ಎಸ್.ಜೈಶಂಕರ್ ಶೀಘ್ರದಲ್ಲೇ ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ.

ಎರಡೂ ಸದನಗಳ ಸದಸ್ಯರಲ್ಲದ ಎಸ್ ಜೈಶಂಕರ್, ಇನ್ನು ಆರು ತಿಂಗಳಲ್ಲಿ ಯಾವುದಾದರೂ ಒಂದು ಸದನದ ಸದಸ್ಯರಾಗಬೇಕಿರುವುದು ಕಡ್ಡಾಯ.

 ಈ ಹಿನ್ನೆಲೆಯಲ್ಲಿ ಎಸ್ ಜೈಶಂಕರ್ ಅವರನ್ನು ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆ ಮಾಡಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗುಜರಾತ್ ನಿಂದ ರಾಜ್ಯಸಭೆಗೆ ಇಬ್ಬರು ಆಯ್ಕೆಯಾಗಬೇಕಿದ್ದು, ಎಸ್ ಜೈಶಂಕರ್ ಮತ್ತು ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಗುಜರಾತ್‌ನ ಎಲ್ಲಾ 26 ಕ್ಷೇತ್ರಗಳಲ್ಲೂ ಬಿಜೆಪಿ ಜಯಗಳಿಸಿದ್ದು, ಈ ಹಿನ್ನೆಲೆಯಲ್ಲಿ ಎಸ್ ಜೈಶಂಕರ್ ಮತ್ತು ರಾಮ್ ವಿಲಾಸ್ ಪಾಸ್ವಾನ್ ಆಯ್ಕೆ ಸುಲಭವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.