ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಕರ್ನಾಟಕ ಬಂದ್‌'ಗೆ ಕರೆ ನೀಡಲಾಗಿತ್ತು. ಆದ್ರೆ ಬಂದ್‌'ಗೆ ಕೆಲ ಸಂಘಟನೆಗಳು ಬೆಂಬಲ ನೀಡಿದರೆ, ಕೆಲವೊಂದು ಸಂಘಟನೆಗಳು ಬೆಂಬಲ ನಿರಾಕರಿಸಿದ್ದವು. ಆದರೀಗ ಇವೆಲ್ಲದರ ನಡುವೆಯೂ ಹಲವು ಜಿಲ್ಲೆಗಳು ಕಾರ್ಯಕರ್ತರು ಒತ್ತಾಯಪೂರ್ವಕ ಬಂದ್ ಮಾಡಿಸಿದ್ದಾರೆ.
ಬೆಂಗಳೂರು(ಜೂ.12): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಕರ್ನಾಟಕ ಬಂದ್'ಗೆ ಕರೆ ನೀಡಲಾಗಿತ್ತು. ಆದ್ರೆ ಬಂದ್'ಗೆ ಕೆಲ ಸಂಘಟನೆಗಳು ಬೆಂಬಲ ನೀಡಿದರೆ, ಕೆಲವೊಂದು ಸಂಘಟನೆಗಳು ಬೆಂಬಲ ನಿರಾಕರಿಸಿದ್ದವು. ಆದರೀಗ ಇವೆಲ್ಲದರ ನಡುವೆಯೂ ಹಲವು ಜಿಲ್ಲೆಗಳು ಕಾರ್ಯಕರ್ತರು ಒತ್ತಾಯಪೂರ್ವಕ ಬಂದ್ ಮಾಡಿಸಿದ್ದಾರೆ.
ವಿಜಯಪುರದಲ್ಲಿ ಬಸ್'ನಲ್ಲಿದ್ದ ಪ್ರಯಾಣಿಕರನ್ನುಕೆಳಗಿಳಿಸಿಳಿಸುವ ಮೂಲಕ ಕಾರ್ಯಕರ್ತರು ಬಂದ್ ಮಾಡಿಸುವ ಯತ್ನ ನಡೆಸಿದ್ದರೆ, ಬಾಗಲಕೋಟೆಯ ಹಳೆ ಬಸ್ ನಿಲ್ದಾಣದ ಬಳಿ ಒತ್ತಾಯಪೂರ್ವಕವಾಗಿ ಅಂಗಡಿ ಬಂದ್ ಮಾಡಿಸಿದ್ದಾರೆ. ಇತ್ತ ದಾವಣಗೆರೆಲ್ಲೂ ಕಾರ್ಯಕರ್ತರು ಬಲವಂತವಾಗಿ ಹೋಟೆಲ್ ಮುಚ್ಚಿಸಿದ್ದಾರೆ.
ಒಟ್ಟಾರೆಯಾಗಿ ಜನರು ಬಂದ್'ಗೆ ಬೆಂಬಲ ನೀಡದಿದ್ದರೂ ಕಾರ್ಯಕರ್ತರೇ ಒತ್ತಾಯಪೂರ್ವಕವಾಗಿ ಬಂದ್ ಮಾಡಿಸುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ಬಂದ್'ಗೆ ಯಾವುದೇ ಬೆಂಬಲ ವ್ಯಕ್ಯವಾಗಿಲ್ಲ.
