ವಿದೇಶಾಂಗ ಸಚಿವಾಲಯ ಮ್ಯಾಗಜಿನ್ ನ 2016 ರ 15 ಜನ ಜಾಗತಿಕ ಚಿಂತಕರ ಪಟ್ಟಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೆಸರನ್ನು ಸೇರಿಸಿದೆ.
ನವದೆಹಲಿ (ಡಿ.14): ವಿದೇಶಾಂಗ ಸಚಿವಾಲಯ ಮ್ಯಾಗಜಿನ್ ನ 2016 ರ 15 ಜನ ಜಾಗತಿಕ ಚಿಂತಕರ ಪಟ್ಟಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೆಸರನ್ನು ಸೇರಿಸಿದೆ.
ಹಿಲರಿ ಕ್ಲಿಂಟನ್, ಆ್ಯಂಜೆಲಾ ಮಾರ್ಕೆಲಾ ಮತ್ತು ಜಸ್ಟಿನ್ ಟ್ರುಡಿಯಾ ಸೇರಿದಂತೆ 14 ಮಂದಿ ಜಾಗತಿಕ ಚಿಂತಕರ ಪಟ್ಟಿಗೆ ಸುಷ್ಮಾ ಸ್ವರಾಜ್ ಸೇರ್ಪಡೆಯಾಗಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಸುಷ್ಮಾರವರು ಕಚೇರಿಯಲ್ಲಿದ್ದಾಗ ಬಿಡುವಿಲ್ಲದೇ, ದಣಿವಿಲ್ಲದೇ ಕೆಲಸ ಮಾಡುತ್ತಾರೆ. ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟರ್ ನಲ್ಲಿ ವೇಗವಾಗಿ ಪ್ರತಿಕ್ರಿಯಿಸಿದಷ್ಟೇ ಸಕ್ರಿಯವಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ, ಕುಂದುಕೊರತೆಗಳಿಗೆ ಸ್ಪಂದಿಸುತ್ತಾರೆ. ಸಮಸ್ಯೆ ಚಿಕ್ಕದಿರಲಿ ದೊಡ್ಡದಿರಲಿ ಎಲ್ಲದಕ್ಕೂ ಪ್ರತಿಕ್ರಿಯಿಸುತ್ತಾರೆ.
ಗಲ್ಫ್ ದೇಶಕ್ಕೆ ವಲಸೆ ಹೋಗಿದ್ದ ಹತ್ತು ಸಾವಿರ ಕಾರ್ಮಿಕರಿಗೆ ವೇತನ ನೀಡದೇ ಹಸಿವಿನಿಂದ ಕಂಗೆಟ್ಟಾಗ ಖುದ್ದು ಸುಷ್ಮಾರವರೇ ಅಲ್ಲಿಗೆ ಹೋಗಿ ಜನರಿಗೆ ಊಟ, ವಸತಿಗೆ ವ್ಯವಸ್ಥೆ ಮಾಡಿಸಿದ್ದರು. ಇದು ಜನರ ಮೆಚ್ಚುಗೆಗೆ ಕಾರಣವಾಗಿತ್ತು.
