ಈ ನಿರಂತರ ಹಲ್ಲೆ - ಹಿಂಸೆಯಿಂದ ರೋಸಿ ಹೋಗಿದ್ದ ದಲಿತ ವಿದ್ಯಾರ್ಥಿಯು ಟಿವಿ ಜಾಲಕ್ಕೆ ಪತ್ರ ಬರೆದು ತನ್ನ ಮೇಲಿನ ಈ ಹಲ್ಲೆಯನ್ನು ದಯವಿಟ್ಟು ನಿಲ್ಲಿಸಿ ಅಂತ ಗೋಗರೆದಿದ್ದ.
ಪಾಟ್ನಾ(ಅ.19): ಆತ ಬಡ ಕುಟುಂಬದ ದಲಿತ ಹುಡುಗ. ಶಾಲೆಯಲ್ಲಿ RANK ವಿದ್ಯಾರ್ಥಿ ಕೂಡ..ಇದೇ ಆತನಿಗೆ ಜೀರ್ಣಿಸಿಕೊಳ್ಳಲಾಗದಂತೆ ಆಗಿದೆ. ಬಿಹಾರದ ಸರ್ಕಾರಿ ಶಾಲೆಯೊಂದರ ದಲಿತ ವಿದ್ಯಾರ್ಥಿಯನ್ನ ಸಹಪಾಠಿಗಳೇ ತೀವ್ರವಾಗಿ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. 16 ವರ್ಷದ ಪ್ರತಿಭಾವಂತ ದಲಿತ ವಿದ್ಯಾರ್ಥಿಯನ್ನ ಸಹಪಾಠಿಗಳು ಕಳೆದ 2 ವರ್ಷಗಳಿಂದಲೂ ಹೊಡೆದು ಬಡಿದು ಹಿಂಸಿಸುತ್ತಿದ್ದರು. ಈ ನಿರಂತರ ಹಲ್ಲೆ - ಹಿಂಸೆಯಿಂದ ರೋಸಿ ಹೋಗಿದ್ದ ದಲಿತ ವಿದ್ಯಾರ್ಥಿಯು ಟಿವಿ ಜಾಲಕ್ಕೆ ಪತ್ರ ಬರೆದು ತನ್ನ ಮೇಲಿನ ಈ ಹಲ್ಲೆಯನ್ನು ದಯವಿಟ್ಟು ನಿಲ್ಲಿಸಿ ಅಂತ ಗೋಗರೆದಿದ್ದ. ಈತನ ಮೇಲೆ ಈಚೆಗೆ ನಡೆದಿದ್ದ ಹಲ್ಲೆಯನ್ನು ವಿದ್ಯಾರ್ಥಿಯೊಬ್ಬ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಕ್ಕೆ ಅಪ್‌ಲೋಡ್ ಮಾಡಿದ್ದು ಅದು ವೈರಲ್ ಆಗಿತ್ತು. ದಲಿತ ವಿದ್ಯಾರ್ಥಿಯ ನಿತ್ಯ ಯಾತನೆಯ ವಿಷಯ ತಿಳಿದು ಕೋಪೋದ್ರಿಕ್ತರಾಗಿ ಪ್ರತಿಭಟನೆಗಿಳಿದ ದಲಿತ ಸಮುದಾಯದವರು, ದಲಿತರ ಮೇಲಿನ ಹಿಂಸೆ, ತಾರತಮ್ಯ ನಿಲ್ಲಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
