Asianet Suvarna News Asianet Suvarna News

ನಿಮ್ಮ ಯೌವನವನ್ನು ಹೆಚ್ಚಿಸುವ ಆಹಾರ ಪದಾರ್ಥಗಳು ಹಾಗೂ ಅವುಗಳ ಗುಣಗಳು

ನಿಮ್ಮ ಯೌವನವನ್ನು ಹೆಚ್ಚಿಸುವ ಆಹಾರ ಪದಾರ್ಥಗಳು ಹಾಗೂ ಅವುಗಳ ಗುಣಗಳು

Foods to Keep You Young

ನಿಮ್ಮ ಯೌವನವನ್ನು ಹೆಚ್ಚಿಸುವ ಆಹಾರ ಪದಾರ್ಥಗಳು ಹಾಗೂ ಅವುಗಳ ಗುಣಗಳು

ಆಲಿವ್ ಎಣ್ಣೆ : ನಿಮ್ಮ ಆರೋಗ್ಯ ಹಾಗೂ ಯೌವನವನ್ನು ಹೆಚ್ಚಿಸುವ ಆಹಾರಗಳಲ್ಲಿ ಆಲೀವ್ ಎಣ್ಣೆಯಲ್ಲಿ ತಯಾರಿಸಿದ ಪದಾರ್ಥಗಳು ಅತಿ ಮುಖ್ಯವಾದುದು. ಆಲಿವ್ ಎಣ್ಣೆ ಬಳಕೆಯ ಪದಾರ್ಥಗಳನ್ನು ಸೇವಿಸಿದರೆ ದೇಹದಲ್ಲಿನ ಕೊಬ್ಬಿನ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ದಶಕಗಳ ಹಿಂದೆಯೇ ಆಲಿವ್ ಎಣ್ಣೆಯ ಉಪಯುಕ್ತತೆಯ ಬಗ್ಗೆ ಸಂಶೋಧಕರು ಉತ್ತಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.ಆಲಿವ್ ಎಣ್ಣೆಯ ಬಳಕೆಯಿಂದ ಹೃದ್ರೋಗ ಹಾಗೂ ಕ್ಯಾನ್ಸ್'ರ್ ತಡೆಯುವ ಅಂಶಗಳು ಹೆಚ್ಚಿವೆ.

ಮೊಸರು: ತಾರುಣ್ಯವನ್ನು ಹೆಚ್ಚಿಸುವ ಆಹಾರ ಪದಾರ್ಥಗಳಲ್ಲಿ ಮೊಸರು ಸಹ ಒಂದು. ಊಟದ ನಂತರ ಮೊಸರನ್ನು ಸೇವಿಸಿದರೆ ಆರೋಗ್ಯಕ್ಕೆ ಅತ್ಯುಪಯುಕ್ತ. ನಿಮ್ಮ ಜೀರ್ಣಾಂಗ ಸಮಸ್ಯೆಯನ್ನು ನಿವಾರಿಸುತ್ತದೆ. ಮುದುಕನನ್ನಾಗಿ ಮಾಡುವುದನ್ನು ಮೊಸರು ತಡೆಯುತ್ತದೆ ಎನ್ನುವುದು ಕುತೂಹಲಕಾರಿಯಾದ ಅಂಶ. ದಿನಕ್ಕೆ 250 ರಿಂದ 500 ಗ್ರಾಂ ಮೊಸರು ತಿಂದರೆ ಮನುಷ್ಯ ಜೀವನ ಪೂರ್ತಿ ಆರೋಗ್ಯವಂತನನ್ನಾಗಿ,ಉತ್ಸಾಹಭರಿತನನ್ನಾಗಿ ಮಾಡುತ್ತದೆ. ರಕ್ತ ನಾಳ ಮತ್ತು ಹೃದಯ ಸಮಸ್ಯೆಯನ್ನು ನೀಗಿಸುತ್ತದೆ.

ಮೀನು: ಯೌವನೋತ್ಸಾಹ ಮಗದಷ್ಟು ಜಾಸ್ತಿಯಾಗುವ ಪದಾರ್ಥಗಳಲ್ಲಿ ಮೀನು ಬಹಳ ಪ್ರಮುಖವಾದುದು.ಪುರಾಣಗಳಲ್ಲಿ,ಇತಿಹಾಸಕಾರರು ಇದನ್ನು ಸ್ಪಷ್ಟ ಪಡಿಸಿದ್ದಾರೆ. ಹೃದಯಬೇನೆ ತೊಂದರೆಗಳು ಮೀನು ಸೇವನೆಯಿಂದ ಕಡಿಮೆಯಾಗುತ್ತದೆ. ಎಣ್ಣೆಯಲ್ಲಿ ಕರಿದು ತಿನ್ನುವುದಕ್ಕಿಂತ ಬೇಯಿಸಿದ ಅಥವಾ ಸುಟ್ಟು ಸೇವಿಸುವುದರಿಂದ ಹೆಚ್ಚು ಉಪಯೋಗ.ದೇಹದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ.

ಕಾಳುಗಳು: ಈ ಆಹಾರ ಪದಾರ್ಥಗಳ ಸೇವನೆಯಿಂದ ಯೌವನ ಹೆಚ್ಚಾಗಿ ದೇಹವು ಉತ್ತಮ ಚೈತನ್ಯದಿಂದ ಕೂಡಿರುತ್ತದೆ. ರಕ್ತ ಶುದ್ಧಿ,ಜೀರ್ಣಾಂಗ ಸಮಸ್ಯೆ ಸಂಪೂರ್ಣ ನಿವಾರಣೆಯಾಗುತ್ತದೆ.ನಿಮ್ಮ  ಜ್ಞಾನಮಟ್ಟವು ಕೂಡ ಸುಧಾರಣೆಯಾಗುತ್ತದೆ. ನಿಮ್ಮ ಆಯಸ್ಸನ್ನು ಕೂಡ ಹೆಚ್ಚಿಸುವ ಗುಣಗಳು ವಿವಿಧ ರೀತಿಯ ಕಾಳುಗಳಲ್ಲಿದೆ. ಮೊಳೆಕೆ ಕಾಳುಗಳಂತು ಇನ್ನಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಬೆರ್ರಿ ಹಣ್ಣು: ಬೆರ್ರಿ ಹಣ್ಣು ಸೇವನೆಯಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ವಯಸ್ಸಿಗೆ ಸಂಬಂಧಪಟ್ಟ ತೊಂದರೆಗಳನ್ನು ನಿವಾರಿಸಲು ಬೆರ್ರಿಹಣ್ಣುಗಳು ಫಲಕಾರಿ.ಮಕ್ಕಳಿಗೆ ಬೆರ್ರಿ ಹಣ್ಣು ಕೊಟ್ಟರೆ ಅತಿಸಾರ ಹರಡುವ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡುತ್ತದೆ.ಬೆರ್ರಿ ಹಣ್ಣಿನಲ್ಲಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಅಂಶವಿರುತ್ತದೆ. ಬೆರ್ರಿ ಹಣ್ಣುಗಳ ಸಾರದಿಂದ ಸಿದ್ಧಪಡಿಸಿದ ಔಷಧಿಗಳು ಹೆಚ್ಚು ವಿದೇಶಗಳಲ್ಲಿ ಹೆಚ್ಚು ಜನಪ್ರಿಯ.

Follow Us:
Download App:
  • android
  • ios