Asianet Suvarna News Asianet Suvarna News

ಡೀಸೆಲ್, ಪೆಟ್ರೋಲ್ ಬೆಲೆ ಇಳಿಕೆ ಇಲ್ಲ :ವಿಪಕ್ಷ, ಸ್ವಪಕ್ಷದ ಬೇಡಿಕೆ ತಿರಸ್ಕರಿಸಿದ ಜೇಟ್ಲಿ

ಹೆದ್ದಾರಿಗಳನ್ನು ನೀವು ಹೇಗೆ ನಿರ್ಮಿಸುತ್ತೀರಿ? ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಸರ್ಕಾರ ಸಾರ್ವಜನಿಕ ವೆಚ್ಚ ಹೆಚ್ಚಿಸುತ್ತಿದೆ. ಜಿಡಿಪಿ ಏನಿದೆಯೋ, ಅದು ಸಾರ್ವಜನಿಕ ವೆಚ್ಚ ಮತ್ತು ಎಫ್‌ಡಿಐ ಬೆಂಬಲಿತವಾಗಿದೆ. ಸಾರ್ವಜನಿಕ ವೆಚ್ಚ ಕಡಿತಗೊಳಿಸಿದಲ್ಲಿ, ಸಾಮಾಜಿಕ ವಲಯದ ಯೋಜನೆಗಳ ಮೇಲಿನ ವೆಚ್ಚವನ್ನು ಕಡಿತಗೊಳಿಸುವುದು ಎಂದರ್ಥಎಂದು ಜೇಟ್ಲಿ ತಮ್ಮ ವಾದವನ್ನು ಸಮರ್ಥಿಸಿದ್ದಾರೆ.

FM Arun Jaitley rules out cutting excise duty on retail fuel prices

ನವದೆಹಲಿ(ಸೆ.20): ಅಬಕಾರಿ ಸುಂಕ ಇಳಿಸುವ ಮೂಲಕ ಪೆಟ್ರೋಲಿಯಂ ಉತ್ಪನ್ನಗಳ ದರ ಕಡಿತ ಮಾಡಬೇಕು ಎಂಬ ವಿಪಕ್ಷಗಳ ಬೇಡಿಕೆಯನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಜೊತೆಗೆ ಅವರ ಈ ನಿರ್ಧಾರ, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಮೂಲಕ ಅವುಗಳ ಬೆಲೆ ಇಳಿಕೆಗೆ ಕಾರಣವಾಗಬೇಕು ಎಂಬ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಬೇಡಿಕೆಯನ್ನೂ ತಿರಸ್ಕರಿಸಿದಂತಿದೆ.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೇಟ್ಲಿ, ’ಸಾರ್ವಜನಿಕ ವೆಚ್ಚಕ್ಕಾಗಿ ಸರ್ಕಾರಕ್ಕೆ ಆದಾಯ ಬೇಕಾಗಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಅಗತ್ಯವಿದೆ. ಸರ್ಕಾರ ನಡೆಸಲು ಕಂದಾಯದ ಅಗತ್ಯವಿದೆ ಎಂಬುದು ನಿಮಗೆ ನೆನಪಿರಲಿ. ಹೆದ್ದಾರಿಗಳನ್ನು ನೀವು ಹೇಗೆ ನಿರ್ಮಿಸುತ್ತೀರಿ? ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಸರ್ಕಾರ ಸಾರ್ವಜನಿಕ ವೆಚ್ಚ ಹೆಚ್ಚಿಸುತ್ತಿದೆ. ಜಿಡಿಪಿ ಏನಿದೆಯೋ, ಅದು ಸಾರ್ವಜನಿಕ ವೆಚ್ಚ ಮತ್ತು ಎಫ್‌ಡಿಐ ಬೆಂಬಲಿತವಾಗಿದೆ. ಸಾರ್ವಜನಿಕ ವೆಚ್ಚ ಕಡಿತಗೊಳಿಸಿದಲ್ಲಿ, ಸಾಮಾಜಿಕ ವಲಯದ ಯೋಜನೆಗಳ ಮೇಲಿನ ವೆಚ್ಚವನ್ನು ಕಡಿತಗೊಳಿಸುವುದು ಎಂದರ್ಥ’ ಎಂದು ಜೇಟ್ಲಿ ತಮ್ಮ ವಾದವನ್ನು ಸಮರ್ಥಿಸಿದ್ದಾರೆ.

Follow Us:
Download App:
  • android
  • ios