ಈ ಬಾರಿ ಬಜೆಟ್'ನಲ್ಲಿ ಬೆಂಗಳೂರಿಗೆ ಬಂಪರ್ ಕೊಡುಗೆ ಸಿಕ್ಕಿದೆ. ಬಹು ಕಾಲಗಳಿಂದ ನನೆಗುದಿಗೆ ಬಿದ್ದಿದ್ದ ಸಬರ್ಬನ್ ರೈಲ್ವೇ ಯೋಜನೆಗೆ ಅನುದಾನ ಸಿಕ್ಕಿದೆ.
ಬೆಂಗಳೂರು (ಫೆ.01): ಈ ಬಾರಿ ಬಜೆಟ್'ನಲ್ಲಿ ಬೆಂಗಳೂರಿಗೆ ಬಂಪರ್ ಕೊಡುಗೆ ಸಿಕ್ಕಿದೆ. ಬಹು ಕಾಲಗಳಿಂದ ನನೆಗುದಿಗೆ ಬಿದ್ದಿದ್ದ ಸಬರ್ಬನ್ ರೈಲ್ವೇ ಯೋಜನೆಗೆ ಅನುದಾನ ಸಿಕ್ಕಿದೆ.
ಈ ಯೋಜನೆಗೆ 17 ಸಾವಿರ ಕೋಟಿ ರೂ ಅನುದಾನ ಸಿಕ್ಕಿದೆ. ಇದು ಮೆಟ್ರೋಗೆ ಸಂಪರ್ಕ ಕಲ್ಪಿಸಲಿದೆ. ಇದು ಬೆಂಗಳೂರಿನ ಜನಕ್ಕೆ ನಿಜಕ್ಕೂ ಅನುಕೂಲವಾಗಲಿದೆ. 160 ಕಿಮೀ ರೈಲ್ವೇ ನೆಟ್'ವರ್ಕ್ ಇರಲಿದೆ. ಬೆಂಗಳೂರಿಗೆ ಸಬರ್ಬನ್ ರೈಲ್ವೇ ಯೋಜನೆ ಸಿಕ್ಕಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ ವಿ ಸದಾನಂದ ಗೌಡ ರೈಲ್ವೇ ಮಂತ್ರಿಯಾಗಿದ್ದಾಗ ಭರವಸೆ ನೀಡಿದ್ದರು.
ಸಬರ್ಬನ್ ರೈಲ್ವೇ ಯೋಜನೆಗೆ ಸಿದ್ದರಾಮಯ್ಯ ನೇತೃತ್ವದ ಸರಕಾರವು ಅನುಮೋದನೆ ನೀಡಿದ್ದು 350 ಕೋಟಿ ರೂ ಮೀಸಲಿರಿಸಿದೆ. ಪೂರ್ತಿ 440 ಕಿಮೀ ಯೋಜನೆಗೆ 10, 500 ಕೋಟಿ ತಗುಲಲಿದೆ.
ಏನಿದು ಸಬ್ ಅರ್ಬನ್ ರೈಲು ?
ಬೆಂಗಳೂರು ಸುತ್ತಮುತ್ತ ರುವ ರಾಮನಗರ, ಮಂಡ್ಯ, ತುಮಕೂರು, ದೊಡ್ಡ ಬಳ್ಳಾಪುರ, ಚಿಕ್ಕ ಬಳ್ಳಾಪಿರ ಮುಂತಾದ ನಗರಗಳೊಡನೆ ಈ ರೈಲಿನ ಮೂಲಕ ಸಂಪರ್ಕ ಕಲ್ಪಿಸಲಾಗುವುದು. ಇದಕ್ಕೆ ಮೆಟ್ರೋ ರೈಲಿನೊಂದಿಗೆ ಸಂಪರ್ಕ ಕಲ್ಪಿಸಿದರೆ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ. ಹೊರ ನಗರಗಳಿಂದ ಆಗಮಿಸುವ ಉದ್ಯೋಗಿಗಳಿಗಂತೂ ವರದಾನವಾಗಿದೆ.
