ಗಡಿಯಲ್ಲಿ ಬೆಳ್ಳಂಬೆಳಗ್ಗೆ ಪಾಕ್ ಪಡೆಗಳ ಅಟ್ಟಹಾಸ : ಒಂದೇ ಕುಟುಂಬದ ಐವರ ಸಾವು

First Published 18, Mar 2018, 12:07 PM IST
Five members of family killed In Jammu Kashmir
Highlights

ಜಮ್ಮು ಕಾಶ್ಮೀರದಲ್ಲಿ ಯುಗಾದಿಯ ಬೆಳ್ಳಂಬೆಳಗ್ಗೆ ಪಾಕಿಸ್ತಾನ ಪಡೆಗಳು ಅಟ್ಟಹಾಸ ಮೆರೆದಿದ್ದು,  ಒಂದೇ ಕುಟುಂಬದ ಐವರು ನಾಗರಿಕರು ಸಾವನ್ನಪ್ಪಿದ್ದಾರೆ. ಅಲ್ಲದೇ ಇನ್ನಿಬ್ಬರು ಗಾಯಗೊಂಡಿದ್ದಾರೆ. 

ಜಮ್ಮು : ಜಮ್ಮು ಕಾಶ್ಮೀರದಲ್ಲಿ ಯುಗಾದಿಯ ಬೆಳ್ಳಂಬೆಳಗ್ಗೆ ಪಾಕಿಸ್ತಾನ ಪಡೆಗಳು ಅಟ್ಟಹಾಸ ಮೆರೆದಿದ್ದು,  ಒಂದೇ ಕುಟುಂಬದ ಐವರು ನಾಗರಿಕರು ಸಾವನ್ನಪ್ಪಿದ್ದಾರೆ. ಅಲ್ಲದೇ ಇನ್ನಿಬ್ಬರು ಗಾಯಗೊಂಡಿದ್ದಾರೆ. 

ಪೂಂಚ್ ಜಿಲ್ಲೆಯ ಬಲಾಕೋಟ್’ನಲ್ಲಿ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ  ನಾಗರಿಕರ ಹತ್ಯೆಯಾಗಿದೆ.  ಮುಂಜಾನೆ 7.45ರ ಸುಮಾರಿಗೆ ಜಮ್ಮು ಕಾಶ್ಮೀರದ  ಬಿಂಬರ್ ವಾಲಿ ಸೆಕ್ಟರ್ ಬಳಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐವರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು  ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಲೆ. ಕರ್ನಲ್ ದೇವೇಂದ್ರ ಆನಂದ್ ಹೇಳಿದ್ದಾರೆ.

 ಗಡಿ ನಿಯಂತ್ರಣ ರೇಖೆಯಿಂದ ಮೂರು ನಾಲ್ಕು ಕಿಲೋಮೀಟರ್ ದೂರ ಇರುವ ನಾಗರಿಕರನ್ನು ಗುರಿಯಾಗಿಸಿಕೊಂಡೇ ಗುಂಡಿನ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಯಾವುದೇ ಸೇನಾ ಪಡೆಯನ್ನೂ ಕೂಡ ನಿಯೋಜನೆ ಮಾಡಲಾಗಿಲ್ಲ. ಆದ್ದರಿಂದ ಇಂತಹ ಭೀಕರ ಅನಾಹುತ ಸಂಭವಿಸಿದೆ. ಘಟನೆ ಬಳಿಕ ಪಾಕ್ ಪಡೆಗಳಿಗೆ ಸೂಕ್ತ  ಪ್ರತಿಕ್ರಿಯೆ ನೀಡಲಾಗಿದೆ ಎಂದು ಹೇಳಿದ್ದಾರೆ.

loader