ಎವರೆಸ್ಟ್ ಏರಿದ ಭಾರತದ ಮೊದಲ ತಂದೆ-ಮಗಳು

First Indian father-daughter duo to climb Everest together
Highlights

ತಂದೆ ಮಗಳು ಏ.16ರಂದು ಪರ್ವತಾರೋಹಣಕ್ಕೆ ತೆರಳಿದ್ದು, ಬುಧವಾರ ಮುಂಜಾನೆ 4.30ರ ವೇಳೆಗೆ ದೀಯಾ ಎವರೆಸ್ಟ್ ತಲುಪಿದ್ದರೆ, ತಂದೆ ಅಜಿತ್ 15ನಿ. ತಡವಾಗಿ ಎವರೆಸ್ಟ್ ಏರಿದರು. 

ನವದೆಹಲಿ[ಮೇ.17]: ದೆಹಲಿಯ ಗುರುಗ್ರಾಮ ಮೂಲದ ಅಜಿತ್  ಬಜಾಜ್ (53) ಮತ್ತು ಮಗಳು ದೀಯಾ ಬಜಾಜ್(24) ಪ್ರಪಂಚದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ ಭಾರತದ ಮೊದಲ ತಂದೆ-ಮಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ತಂದೆ ಮಗಳು ಏ.16ರಂದು ಪರ್ವತಾರೋಹಣಕ್ಕೆ ತೆರಳಿದ್ದು, ಬುಧವಾರ ಮುಂಜಾನೆ 4.30ರ ವೇಳೆಗೆ ದೀಯಾ ಎವರೆಸ್ಟ್ ತಲುಪಿದ್ದರೆ, ತಂದೆ ಅಜಿತ್ 15ನಿ. ತಡವಾಗಿ ಎವರೆಸ್ಟ್ ಏರಿದರು.

ಪದ್ಮಶ್ರೀ ಪುರಸ್ಕೃತ ಅಜಿತ್ 2006-07ರಲ್ಲಿ ದಕ್ಷಿಣ ಧ್ರುವ ಮತ್ತು ಉತ್ತರ ಧ್ರುವಕ್ಕೆ ತೆರಳಿದ್ದ ಮೊದಲ ಭಾರತೀಯನೆನಿಸಿಕೊಂಡಿದ್ದರು.

loader